




ಕಡಬ ಟೈಮ್ಸ್(KADABA TIMES):ಲಾರಿಯೊಂದು ಸಂಚರಿಸುತ್ತಿರುವಾಗಲೇ ಬೆಂಕಿಗೆ ಆಹುತಿಯಾದ ಘಟನೆ ಇಂದು ಮಧ್ಯಾಹ್ನ ಕಾಸರಗೋಡಿನ ಪೆರ್ಲ ಸಮೀಪದ ನಲ್ಕದಲ್ಲಿ ನಡೆದಿದೆ.
ಲಾರಿಯಲ್ಲಿ ಜಲ್ಲಿ ತುಂಬಿಸಿಕೊಂಡು ವಿಟ್ಲ ಕಡೆಯಿಂದ ಬದಿಯಡ್ಕಕ್ಕೆ ಹೋಗುತ್ತಿದ್ದ ಲಾರಿಯಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಒಮ್ಮೆಗೆ ಲಾರಿಯನ್ನು ದಾರಿ ಮಧ್ಯೆಯೇ ನಿಲ್ಲಿಸಿದ ತಕ್ಷಣವೇ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಥಳಕ್ಕೆ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು ಅಗ್ನಿ ಶಾಮಕ ದಳ ಸಿಬ್ಬಂದಿ ಹೆಚ್ಚಿನ ದುರಂತವನ್ನು ತಪ್ಪಿಸಿದರು.ಲಾರಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ