




ಕಡಬ ಟೈಮ್ಸ್(KADABA TIMES):ಹಿಂದೂ ಧರ್ಮ ಹೊರತುಪಡಿಸಿದರೇ ಜಗತ್ತಿನಲ್ಲಿ ಬೇರೆ ಯಾವುದೇ ಧರ್ಮ ಇಲ್ಲ,ಮತಗಳು ಮಾತ್ರ ಇವೆ ಎಂದು ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಉಡುಪಿಯ ಕಡಿಯಾಳಿಯ ಶ್ರೀ ಮಹಿಷಮರ್ದಿನಿ ವೇದಿಕೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದ ಅವರು ಜೀವನ ಪದ್ಧತಿ ತಿಳಿಸಿಕೊಡುವುದೇ ಧರ್ಮ,ಜಗತ್ತಿನಲ್ಲಿ ಇರುವಂತಹ ಏಕೈಕ ಧರ್ಮ ಅದು ಹಿಂದೂ ಧರ್ಮ ಮಾತ್ರ.

ಹಿಂದೂ ಸಮಾಜದಲ್ಲಿ ಇಂದು ಶ್ರದ್ಥೆ ಕಡಿಮೆಯಾಗುತ್ತಿದೆ. ಗೋ ಜಿಹಾದ್ ಇತ್ಯಾದಿಗಳು ನಡೆಯುತ್ತಿದೆ. ಸ್ವಾರ್ಥಿಗಳಾದವರ ಜೊತೆ ದೇವರು ನಿಲ್ಲುವುದಿಲ್ಲ. ನಾವು ಎಚ್ಚೆತ್ತುಕೊಂಡು ಒಟ್ಟಾಗಿ ಮುನ್ನಡೆದರೇ ಮಾತ್ರ ದೇವರ ಅನುಗ್ರಹ ಸಿಗುತ್ತದೆ ಎಂದರು.