




ಕಡಬ ಟೈಮ್ಸ್(KADABA TIMES):ಕಡಬ:ಕಡಬ ತಾಲೂಕಿನ ಆಲಂತಾಯ ಗ್ರಾಮಕ್ಕೆ ಗ್ರಾಮ ಸಹಾಯಕರು ಇಲ್ಲದೆ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದಿದೆ. ಹುದ್ದೆ ಭರ್ತಿ ಮಾಡಲು ಅರ್ಜಿ ಕರೆದು ಮೂರು ತಿಂಗಳಾಗುತ್ತಾ ಬಂದರೂ ಸಿಬ್ಬಂದಿ ನೇಮಕ ಮಾಡದ ಕಾರಣ ಕಂದಾಯ ಇಲಾಖೆ ವಿಳಂಬ ದೋರಣೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಆಲಂತಾಯ, ಕೊಣಾಲು ,ಗೋಳಿತೊಟ್ಟು ಈ 3 ಗ್ರಾಮಗಳಿಗೆ ಒಬ್ಬರು ಗ್ರಾಮ ಸಹಾಯಕರು ನಿರ್ವಹಿಸುತ್ತಿದ್ದಾರೆ. ಒಬ್ಬರೇ ಸಿಬ್ಬಂದಿ ಈ ಎಲ್ಲಾ ಗ್ರಾಮಗಳ ಕಡತಗಳನ್ನು ನಿರ್ವಹಿಸಲು ಕಷ್ಟ. ತೆರವುಗೊಂಡ ಗ್ರಾಮ ಸಹಾಯಕ ಹುದ್ದೆಯನ್ನು ಭರ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ನಡುವೆ ಗ್ರಾಮ ಸಹಾಯಕ ಹುದ್ದೆಗಾಗಿ ಇಲಾಖಾ ಮಟ್ಟದಲ್ಲಿ ತೆರೆಮರೆಯಲ್ಲಿ ಭಾರೀ ಲಾಬಿ ನಡೆಯುತ್ತಿರುವ ಸುದ್ದಿಯೂ ಹರಿದಾಡುತ್ತಿದೆ. ಗ್ರಾಮ ಸಹಾಯಕ ಹುದ್ದೆಗೆ ಸುಮಾರು ಹತ್ತಕ್ಕಿಂತಲೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಆಲಂತಾಯ ಗ್ರಾಮವೊಂದರಲ್ಲೇ ಏಳು ಆಕಾಕ್ಷಿಗಳು ಅರ್ಜಿ ಸಲ್ಲಿಸಿರುವ ಮಾಹಿತಿ ಲಭಿಸಿದೆ.
ಇದೀಗ ಆಲಂತಾಯದ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ನೀಡಿ , ಆಲಂತಾಯ ಗ್ರಾಮದವರು ಹೊರತು ಬೇರೆ ಗ್ರಾಮದವರನ್ನು ಗ್ರಾಮ ಸಹಾಯಕ ಹುದ್ದೆಗೆ ನೇಮಕ ಮಾಡಬಾರದು ಎಂದು ಮನವಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಆಲಂತಾಯ ಗ್ರಾಮದ ಅರ್ಜಿದಾರರಿಗೆ ಮಾತ್ರ ಹುದ್ದೆಯನ್ನು ನೀಡಬೇಕೆಂದು ಭೀಮ್ ಆರ್ಮಿ ಕಡಬ ಘಟಕವು ತಹಶೀಲ್ದಾರ್ ಗೆ ಮನವಿ ನೀಡಿದೆ.


“ಗ್ರಾಮ ಸಹಾಯಕ ಹುದ್ದೆಯನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಇಲಾಖಾ ಹಂತದಲ್ಲಿ ಪರಿಶೀಲನೆಯಲ್ಲಿದೆ”- ಅನಂತ ಶಂಕರ , ಕಡಬ ತಹಶೀಲ್ದಾರ್
“ಈಗಾಗಲೇ ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಸಹಾಯಕ ಆಯುಕ್ತರು,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಸಚಿವರ ಗಮನಕ್ಕೂ ತಂದಿದ್ದೇವೆ – ಜನಾರ್ಧನ ಗೌಡ ಗೋಳಿತ್ತೊಟ್ಟು ಗೋಳಿತ್ತೊಟ್ಟು ಗ್ರಾ.ಪಂ ಅಧ್ಯಕ್ಷ
” ಕಾನೂನು ರೀತಿಯಲ್ಲಿ ಆಯಾ ಗ್ರಾಮದ ಆಕಾಕ್ಷಿಗಳಿಗೆ ನೀಡಬೇಕೆಂಬ ನಿಯವಿದೆ.ಹತ್ತು ದಿನದ ಒಳಗೆ ಕಂದಾಯ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡದಿದಲ್ಲಿ ಗೋಳಿತ್ತೊಟ್ಟು ,ಆಲಂತಾಯ ಗ್ರಾಮಸ್ಥರ ಸಹಕರದೊಂದಿಗೆ ಭೀಮ್ ಆರ್ಮಿ ಸಂಘಟನೆಯು ತಹಶೀಲ್ದಾರ್ ಕಚೇರಿ ಎದುರು ಪತಿಭಟನೆ ಮಾಡಲಿದೆ “- ರಾಘವ ಕಳಾರ ,ಭೀಮ್ ಆರ್ಮಿ ಕಡಬ ಘಟಕದ ಅಧ್ಯಕ್ಷ