




ಕಡಬ ಟೈಮ್ಸ್(KADABA TIMES):ಸ್ನಾನಕ್ಕೆಂದು ಬಿಸಿ ನೀರು ಕಾಯಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಮ್ಮುಂಜೆಯಲ್ಲಿ ನಡೆದಿದೆ.
ಬಂಟ್ವಾಳದ ಅಮ್ಮುಂಜೆ ನಿವಾಸಿ ರವೀಂದ್ರ ಅವರ ತಾಯಿ ಮೃತ ದುರ್ದೈವಿ.ರವೀಂದ್ರ ಅವರ ತಾಯಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಸ್ನಾನಕ್ಕೆಂದು ಬಿಸಿ ನೀರು ಕಾಯಿಸುವ ಸಂದರ್ಭ ಒಲೆಗೆ ತೆಂಗಿನ ಗರಿಯಿಂದ ಬೆಂಕಿ ಮಾಡುತ್ತಿದ್ದು ಏಕಾಏಕಿ ಬೆಂಕಿ ಸೀರೆಗೆ ತಗುಲಿದೆ.

ಬೊಬ್ಬೆ ಕೇಳಿ ನೆರೆಮನೆಯವರು ಸಹಾಯಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ಮಹಿಳೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.