




ಕಡಬ ಟೈಮ್ಸ್(KADABA TIMES):ರಾಮಕುಂಜ: ಎಂಡೋಪೀಡಿತ ಮಕ್ಕಳ ಆರೈಕೆಗಾಗಿ ಸರಕಾರವು ಐದು ಎಕರೆ ಜಮೀನನ್ನು ಆಲಂಕಾರಿನಲ್ಲಿ ಕಾದಿರಿಸಿದೆ. ಇಲ್ಲಿ ಪಾಲನಾ ಕೇಂದ್ರ ನಿರ್ಮಾಣವಾದಲ್ಲಿ ಅನುಕೂಲವಾಗಲಿದೆ. ವಿಕಲಚೇತನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಂಘ ಸಂಸ್ಥೆಗಳು ಕೆಲಸ ಮಾಡಬೇಕು ಎಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಸದಸ್ಯೆ ಮಂಜುಳಾ ಕೆ.ಸಿ ಹೇಳಿದರು.
ಅವರು ಯುವವಾಹಿನಿ ಕಡಬದ ಘಟಕದ ವತಿಯಿಂದಸೇವಾ ಭಾರತಿ ಮುನ್ನಡೆಸಲ್ಪಡುತ್ತಿರುವ ರಾಮಕುಂಜ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಜೂ.೬ ರಂದು ನಡೆದ ವಿಶೇಷ ಮಕ್ಕಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಪ್ರವೀಣ್ ಓಂಕಾಲ್ ಮಾತನಾಡಿ ವಿಶೇಷ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಶಿಕ್ಷಕ ಬಳಗದ ಕಾಳಜಿ ಗಮನಾರ್ಹವೆಂದರು. ಈ ಸಂದರ್ಭ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐದು ವಿಕಲಚೇತನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸೇರಿದಂತೆ ಸಿಬ್ಬಂದಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಇದೇ ವೆಳೆ ಯುವ ವಾಹಿನಿಯ ಶಾಶ್ವತ ನೆನಪಿಗಾಗಿ ಗೋಡ್ರೆಜ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.ಜೊತೆಗೆ ನೂರು ತೆಂಗಿನಕಾಯಿ, ಹಳೆಯ ವಾರ್ತಾಪತ್ರಿಕೆಯನ್ನು ಸಂಗ್ರಹಿಸಿ ಕೊಡಲಾಯಿತು. ಮಾಜಿ ಸೈನಿಕ ಹರೀಶ್ ಕರ್ಕೇರ ,ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ ಶುಭ ಹಾರೈಸಿದರು.ಬಳಿಕ ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಘಟಕದ ಜೊತೆ ಕಾರ್ಯದರ್ಶಿ ಸರಿತಾ ಉಂಡಿಲ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಪ್ಪ ಅಮೈ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಪದಾಧಿಕಾರಿಗಳು ಸಹಕರಿಸಿದರು.