




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಶಾಲಾ ರಂಗಭಾರತಿ ಸಭಾಂಗಣದಲ್ಲಿ ಜೂ.4 ರಂದು ನಡೆಯಿತು.
ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಅಬ್ರಹಾಂ ವರ್ಗೀಸ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ವಹಿಸುವುದು ನಾಗರಿಕರ ಜವಾಬ್ದಾರಿ. ಬಡ ಮಕ್ಕಳ ಓದುವಿಕೆಗೆ ಪ್ರೋತ್ಸಾಹ ಅಗತ್ಯ ವೆಂದರು.
ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ, ಜೇಸಿಐ ನೆಲ್ಯಾಡಿ, ಬೆಸ್ಟ್ ಫ್ರೆಂಡ್ ವಾಟ್ಸಪ್ ಗ್ರೂಪ್, ಸೈಂಟ್ ಜಾರ್ಜ್ ನೆಲ್ಯಾಡಿ ಸಂಸ್ಥೆಗಳು ಕೈ ಜೋಡಿಸಿವೆ. ಪಡುಬೆಟ್ಟು, ಕೊಣಾಲು ಶಾಲೆ ,ಹೊಸಮಜಲು ಶಾಲೆ ,ರಂಗಭಾರತಿ, ಸೈಂಟ್ ಜಾರ್ಜ್ ಶಾಲೆಯ ಒಟ್ಟು ಸುಮಾರು 100 ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಉದ್ಯಮಿ ಕೃಷ್ಣಪ್ಪ ಬೆಂಗಳೂರು,ಜಿ.ಪಂ ಮಾಜಿ ಸದಸ್ಯ ಸರ್ವೂತ್ತಮ ಗೌಡ,ತಾ.ಪಂ ಮಾಜಿ ಸದಸ್ಯ ಉಷಾ ಅಂಚನ್ ,ಉದ್ಯಮಿ ಕೆ ಪಿ. ತೋಮಸ್ ನೆಲ್ಯಾಡಿ,ರಂಗಭಾರತಿ ಶಾಲೆಯ ಮುಖ್ಯ ಶಿಕ್ಷಕ ಆನಂದ ಅಜಲ,ವಕೀಲ ಇಸ್ಮಾಯಿಲ್,ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ , JCI ಜಯಂತಿ ಅಧ್ಯಕ್ಷತೆ ವಹಿಸಿದ್ದರು.
ಸಂಘಟಕ ರಫೀಕ್ ಅಪ್ಪಿ , ನೆಲ್ಯಾಡಿ ಶಾಲಾ ದೈಹಿಕ ಶಿಕ್ಷಕ ಜನಾರ್ದನ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.