




ಕಡಬ ಟೈಮ್ಸ್(KADABA TIMES):ಸುಳ್ಯ:ಇಲ್ಲಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಹೊತ್ತಿ ಉರಿದ ಗೋದಾಮಿನೊಳಗೆ ವೃದ್ಧರ ಮೃತದೇಹ ಪತ್ತೆಯಾಗಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲದ ಮಹಾಲಿಂಗೇಶ್ವರ ಭಟ್ ಗೋದಾಮಿನೊಳಗೆ ಮೃತಪಟ್ಟ ವ್ಯಕ್ತಿ.
ಜೂನ್ ೬ ರಂದು ಮುಂಜಾನೆ ಕರಟಿದ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯವರು ಹೋಗಿ ನೋಡಿದಾಗ ಗೋದಾಮು ಬೆಂಕಿ ಹತ್ತಿಹೊಂಡು ಉರಿಯುತ್ತಿತ್ತು . ಒಳಗೆ ಮಹಾಲಿಂಗೇಶ್ವರ ಭಟ್ ರವರ ಮೃತದೇಹ ಇರುವುದು ಕಂಡು ಬಂದಿದೆ ಎನ್ನಲಾಗಿದೆ.

ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು , ಗೋದಾಮಿನಲ್ಲಿದ್ದ ಅಡಿಕೆ, ಕಾಳುಮೆಣಸು ಬೆಂಕಿಗಾಹುತಿಯಾಗಿರುವುದಾಗಿ ತಿಳಿದು ಬಂದಿದೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಗೋದಾಮಿಗೆ ಹಿಡಿದ ಬೆಂಕಿ ನಂದಿಸಲು ಹೋಗಿ ಮೃತಪಟ್ಟರೋ ಎಂಬುದು ತಿಳಿದು ಬಂದಿಲ್ಲ.ಸುಳ್ಯ ಪೋಲೀಸರು ಬಂದು ಮಹಜರು ನಡೆಸಿ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.