




ಕಡಬ ಟೈಮ್ಸ್ (KADABA TIMES):ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಾಧಿಕಾರ ರಚನೆ ಸಂದರ್ಭ ಕೂಜುಗೋಡು ಕಟ್ಟೆಮನೆ ಮನೆತನಕ್ಕೆ ಪ್ರಾತಿನಿಧ್ಯ ನೀಡಿ ಪ್ರಾಧಿಕಾರದಲ್ಲಿ ಸದಸ್ಯತನ ನೀಡಿ ಪರಿಗಣಿಸುವಂತೆ ಕೂಜುಗೋಡು ಕಟ್ಟೆಮನೆ ಮನೆತನದ ಜಯರಾಮ ಕಟ್ಟೆಮನೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿ ,ಕೂಜುಗೋಡು ಕಟ್ಟೆಮನೆ ಮನೆತನಕ್ಕೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಹಲವು ವರ್ಷಗಳ ಕಾಲದ ಸಂಬಂಧವಿದೆ. ಈ ದೇವಸ್ಥಾನದ ಆಡಳಿತದಲ್ಲಿ ನಮ್ಮ ಮನೆತನವು ಹಿಂದಿನ ಕಾಲದಿಂದಲೂ ಇದ್ದು ನಮ್ಮಲ್ಲಿದ್ದಲೇ ಇಲ್ಲಿನ ಪೂಜೆಗೆ ಸಂಬಂಧಿಸಿದ ಪರಿಕರಗಳನ್ನು ಪೂರೈಸಲಾಗಿತ್ತು .

ಅಲ್ಲದೆ ನಮ್ಮ ಮನೆತನದ ದಿ.ಕೆ ಕುಶಾಲಪ್ಪ ಗೌಡ, ಕೆ.ವೆಂಕಟ್ರಮಣ ಗೌಡ, ಕೆ.ಸುಬ್ರಹ್ಮಣ್ಯ ಗೌಡ ಇಲ್ಲಿನ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಿದ್ದಾರೆ. ಇದನ್ನೆಲ್ಲಾ ಪರಿಗಣಿಸಿ ನಮ್ಮ ಮನೆತನಕ್ಕೆ ಪ್ರಾಧಿಕಾರದಲ್ಲಿ ಅವಕಾಶ ನೀಡಲೇಬೇಕು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪದ್ಮಯ್ಯ ಮಾಸ್ಟರ್ ಕಟ್ಟೆಮನೆ, ದಾಮೋದರ ಕೆ.ಎಸ್, ದಯಾನಂದ ಕಟ್ಟೆಮನೆ,ಪರಮೇಶ್ವರ ಕಟ್ಟೆಮನೆ, ಶೈಲೈಶ್ ಕಟ್ಟೆಮನೆ, ಪ್ರಧಾನ್ ಕೆ.ಎಸ್, ಗಾಂಗಾಧರ ಕೆ ಉಪಸ್ಥಿತರಿದ್ದರು.