ಕಾಂಗ್ರೆಸ್ ನ ಕಪಟ ನಾಟಕ ಜನರಿಗೆ ಗೊತ್ತಾಗಿದೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ನ ಕಪಟ ನಾಟಕ ಜನರಿಗೆ ಗೊತ್ತಾಗಿದೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Kadaba Times News
0

ಕಡಬ ಟೈಮ್ಸ್ (KADABA TIMES):ಈ ರಾಜ್ಯದ ರಕ್ಷಣೆ ಯಡಿಯೂರಪ್ಪರಿಂದ ಸಾಧ್ಯ ಎಂದು ಜ‌ನರಿಗೆ ಗೊತ್ತಾಗಿದೆ,  ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ನ ಕಪಟ ನಾಟಕ ಎನ್ನುವುದೂ ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ನರೇಂದ್ರ ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ. ಕೋವಿಡ್ ನಿರ್ವಹಣೆಯ ಸಫಲತೆ ಈ ಫಲಿತಾಂಶದಲ್ಲಿ ಕಂಡಿದೆ ಎಂದರು.

ಬಿ ಎಸ್. ಯಡಿಯೂರಪ್ಪವನರು ಮುಖ್ಯಮಂತ್ರಿಯಾದ ನಂತರ ಸವಾಲುಗಳು ಎದುರಾದವು. ಎಲ್ಲವನ್ನೂ ಯಶಸ್ವಿಯಾಗಿ ಯಡಿಯೂರಪ್ಪನವರು ನಿರ್ವಹಿಸಿದ್ದಾರೆ. ಕೋವಿಡ್-19 ನಿಯಂತ್ರಣದಲ್ಲೂ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ರಾಜ್ಯದ ರಕ್ಷಣೆ ಯಡಿಯೂರಪ್ಪರಿಂದ ಸಾಧ್ಯ ಎಂದು ಜ‌ನ ಮನಗಂಡಿದ್ದಾರೆ ಎಂದು ಹೇಳಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top