




ಕಡಬ ಟೈಮ್ಸ್ (KADABA TIMES):ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರನ್ನಾಗಿ ಹಿರಿಯ ಶಾಸಕ ಸುಳ್ಯದ ಎಸ್.ಅಂಗಾರ ಅವರನ್ನು ವಿಧಾನ ಸಭಾಧ್ಯಕ್ಷರು ನೇಮಕ ಮಾಡಿದ್ದಾರೆ.

ಇತರ ಸದಸ್ಯರುಗಳಾಗಿ ವಿಧಾನ ಸಭೆಯಿಂದ ಎಂ. ಚಂದ್ರಪ್ಪ, ಎಂ.ಪಿ.ಕುಮಾರಸ್ವಾಮಿ, ಪಿ.ರಾಜೀವ್, ಡಾ.ಅವಿನಾಶ್ ಯಾದವ್, ಎನ್.ಲಿಂಗಣ್ಣ, ಸಂಜೀವ ಮಠಂದೂರು, ಹರ್ಷವರ್ಧನ್, ಪಿ.ಟಿ. ಪರಮೇಶ್ವರ ನಾಯಕ್, ಅನಿಲ್ ಚಿಕ್ಕಮಾದು, ಬಸವನ ಗೌಡ ದದ್ದಲ್, ಡಿ.ಎಸ್. ಹೋಲಗೇರಿ, ಹೆಚ್.ಕೆ. ಕುಮಾರಸ್ವಾಮಿ, ಎಸ್.ಆರ್.ಶ್ರೀನಿವಾಸ, ಎಂ. ಅಶ್ವಿನ್‌ಕುಮಾರ್ ವಿಧಾನ ಪರಿಷತ್‌ನಿಂದ ಆರ್. ಧರ್ಮಸೇನ, ಆರ್.ಶಂಕರ್, ಎಸ್.ವೀಣಾ ಅಚ್ಚಯ್ಯ, ಹೆಚ್,ಎಂ. ಗಣೇಶ್ ಗೌಡ ಮತ್ತು ಡಾ.ತಳವಾರ್ ಸಾಬಣ್ಣರವರನ್ನು ನೇಮಿಸಲಾಗಿದೆ.