




ಕಡಬ ಟೈಮ್ಸ್ (KADABA TIMES): ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ, ಆ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಲ್ಲಿ ನ.13 (ಶುಕ್ರವಾರ) ರಂದು ಬೃಹತ್ ಎಸ್.ಸಿ.ಡಿ(ಅಸಾಂಕ್ರಾಮಿಕ ರೋಗ) ಮತ್ತು ಕೋವಿಡ್-೧೯ ತಪಾಸಣಾ ಶಿಬಿರ ಆಯೋಚಿಸಿದೆ.
ರಕ್ತದೊತ್ತಡ, ಸಕ್ಕರೆ ಖಾಯಿಲೆ, ಬ್ಲಡ್ ಗ್ರೂಪ್ ಪರೀಕ್ಷೆಗಳೂ ಒಳಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ತಾ.ಪಂ, ಪಟ್ಟಣ ಪಂಚಾಯತ್ ಈ ಶಿಬರಕ್ಕೆ ಸಹಯೋಗ ನೀಡಿದೆ.