ಕುಟ್ರುಪಾಡಿ: ಕೇಪು ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆ ಆರೋಪ| ಕಡಬ ಠಾಣೆಗೆ ದೂರು ಸಲ್ಲಿಸಿದ ಸ್ಥಳೀಯರು

ಕುಟ್ರುಪಾಡಿ: ಕೇಪು ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆ ಆರೋಪ| ಕಡಬ ಠಾಣೆಗೆ ದೂರು ಸಲ್ಲಿಸಿದ ಸ್ಥಳೀಯರು

Kadaba Times News
0

ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಕೇಪು ಅಮೈ ಎಂಬಲ್ಲಿರುವ ಮಸೀದಿಯಿಂದ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳಿಂದ ಕಡಬ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

ಮಸೀದಿಯಲ್ಲಿ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದ್ದು ಇದರಿಂದ ಇಲ್ಲಿಯ ಮಕ್ಕಳಿಗೆ ಹಾಗೂ ಸಾರ್ವಜನಿಕ ರಿಗೆ ತೊಂದರೆ ಉಂಟಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕೂಡಲೇ ಧ್ವನಿವರ್ಧಕ ವನ್ನು ತೆರವುಗೊಳಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯೆ ಪುಲಸ್ತ್ತ ರೈ, ಶಿವರಾಮ ಶೆಟ್ಟಿ ಕೇಪು, ಜಯಚಂದ್ರ ರೈ ಕುಂಟೋಡಿ, ಗಂಗಾಧರ ಗೌಡ ಹಳ್ಳಿ,ಪದ್ಮನಾಭ ರೈ, ಮಾಧವ ರೈ, ಶಿವಪ್ರಸಾದ್ ರೈ ಮೈಲೇರಿ,ಹರೀಶ್ ರೈ, ದೀಕ್ಷಿತ್ ಗೌಡ, ಶ್ರೀಧರ ಶೆಟ್ಟಿ, ವಿದ್ಯಾಧರ ,ಮನಮೋಹನ್ ರೈ,ಪ್ರಮೋದ್ ರೈ,ಸತೀಶ್, ಹರೀಶ್, ಉಮೇಶ್, ಗಣೇಶ್ ಕೆ.ಎಂ‌. ಮೊದಲಾದವರು ಉಪಸ್ಥಿತರಿದ್ದರು. ಮನವಿಯನ್ನು ಕಡಬ ಠಾಣಾ ಸಬ್ ಇನ್ಸ್ ಪೆಕ್ಟರ್ ರುಕ್ಮ ನಾಯ್ಕ್ ಅವರಿಗೆ ನೀಡಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top