




ಕಡಬ ಟೈಮ್ಸ್ (KADABA TIMES):ಕಡಬ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಪೋರಂ ಕಡಬ ತಾಲೂಕಿನ ನೂತನ ಸಮಿತಿಯ ರಚನೆಯು ಕಡಬದ “ಅಂಬೇಡ್ಕರ್ ಭವನ ದಲ್ಲಿ ಎಐಎಂಡಿಫ್ ರಾಜ್ಯ ಕಾರ್ಯಾಧ್ಯಕ್ಷ ಅಬೂಬಕರ್ ಸಜೀಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಹಾಜಿ.ಕೆ.ಎಂ.ಹನೀಫ್, ಉಪಾಧ್ಯಕ್ಷರಾಗಿ ಅನ್ವರ್ ವೆರೈಟಿ,ಫೈಝಲ್ ಎಸ್,ಇ.ಎಸ್ ,ಮಹಮ್ಮದ್ ಆಲಿ ಹೊಸ್ಮಠ, ಮೊಯಿದ್ದೀನ್ ಪಿ.ಎಂ.ಪೊರಂತು,ಈಸುಬ್ ಸುಂಕದಕಟ್ಟೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಕೊರಂದೂರು ,ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ರಾವತರ್ ಕೊಡಿಂಬಾಳ , ಜತೆ ಕಾರ್ಯದರ್ಶಿಯಾಗಿ ಕೆ.ಎಂ ಫಾರೂಕ್ ಕಡಬ,ಕೋಶಾಧಿಕಾರಿಯಾಗಿ ಶಾಕೀರ್ ಪಿಲ್ಯ ಮರ್ಧಾಳ.,ಪತ್ರಿಕಾ ಕಾರ್ಯದರ್ಶಿಯಾಗಿ ಖಾದರ್ ಸಾಹೇಬ್ ಕಲ್ಲುಗುಡ್ಡೆ ,ಶರೀಫ್ ಕೆ.ವೈ ಕಡಬ,ಸಿದ್ದೀಕ್ ಕೊರಂದೂರು ಹಾಗೂ ಎಐಎಂಡಿಫ್ ಕಡಬ ತಾಲೂಕು ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕಮಾಡಲಾಯಿತು.

ಎಐಎಂಡಿಫ್ ರಾಜ್ಯ ಕಾರ್ಯಾಧ್ಯಕ್ಷ ಅಬೂಬಕರ್ ಸಜೀಪರವರು ಮಾತನಾಡಿ, ಸ್ಥಾಪಕಾಧ್ಯಕ್ಷರಾದ ಶಕೀಲ್ ಹಸನ್.ಹೆಚ್ ಮತ್ತು ರಾಜ್ಯಾಧ್ಯಕ್ಷರಾದ ನಸೀರ್ ಅಹಮದ್ ರವರ ಪರಿಶ್ರಮದಿಂದ, ಸಮುದಾಯದ ಉನ್ನತಿಗೆ ಶ್ರಮಿಸುವ ದೂರದೃಷ್ಟಿಯಿಂದ ಸ್ಥಾಪನೆಗೊಂಡ “ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ”ನ ದ್ಯೇಯೋದ್ದೇಶಗಳನ್ನು ಸವಿಸ್ತಾರವಾಗಿ ತಿಳಿಸಿದರು. ಎಐಎಂಡಿಫ್ ಕಡಬ ತಾಲೂಕು ಅಧ್ಯಕ್ಷ ಹಾಜಿ ಕೆ.ಎಂ.ಹನೀಫ್, ಮಾಜಿ ಜಿ .ಪಂ ಸದಸ್ಯ ಸೈಯದ್ ಮೀರಾ ಸಾಹೇಬ್ , ಹಮೀದ್ ಹಾಜಿ, ಯುವ ಉದ್ಯಮಿ ಅನ್ವರ್ ವೆರೈಟಿ ಕಡಬ ವೇದಿಕೆಯಲ್ಲಿದ್ದರು. .