




ಕಡಬ ಟೈಮ್ಸ್ (KADABA TIMES):ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ಈ ಹಬ್ಬದ ಸಡಗರ ಮುನ್ನ ಬಲ್ಯದ ವ್ಯಕ್ತಿಯೊಬ್ಬರಿಗೆ ಭರ್ಜರಿ ಕಾರ್ ಗಿಪ್ಟ್ ಬಂದು ಊರೆಲ್ಲ ಸುದ್ದಿಯಾಗಿದೆ.
ಕುಟ್ರುಪ್ಪಾಡಿ ಗ್ರಾಮದ ಬಲ್ಯ ನಿವಾಸಿ ಅನುರಾಧ ಪುತ್ತಿಲ ಎಂಬವರಿಗೆ ಅಂಚೆ ಮೂಲಕ ಪತ್ರವೊಂದು ಬಂದಿತ್ತು. ಅದರಲ್ಲಿ ಇರುವ ಕಾರ್ಡನ್ನು ಸ್ಕ್ರೇಚ್ ಮಾಡಿದಾಗ ಮೊದಲ ಬಹುಮಾನ ಟಾಟಾ ಸಫಾರಿ ಕಾರು ಬಹುಮಾನವಾಗಿ ಇರುವುದು ಗೊತ್ತಾಗಿದೆ.

ಇದೊಂದು ಮೋಸದ ಜಾಲವೆಂದು ಅರಿತ ಅನುರಾಧ ಅವರು ಪತ್ರದಲ್ಲಿರುವ ಸಂಖ್ಯೆಯನ್ನು ಸಂಪರ್ಕಿಸಿ ಅನಾಮಿಕ ವ್ಯಕ್ತಿಯ ಜೊತೆ ಸಂಭಾಷಣೆ ಮಾಡಿದ್ದಾರೆ. ಈ ವೇಳೆ ಅನಾಮಿಕ ವ್ಯಕ್ತಿ ಬಹುಮಾನ ರೂಪದಲ್ಲಿ ಬಂದಿರುವ ಕಾರಿನ ಬದಲಾಗಿ ಹಣವನ್ನೇ ಪಡೆಯುವಂತೆ ಒತ್ತಾಯಿಸಿದ್ದಾನೆ, ಅಲ್ಲದೆ ತೆರಿಗೆ ರೂಪದಲ್ಲಿ ಆರಂಭಿಕ 25,000ರೂ ಅನ್ನು ನವ ದೆಹಲಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾನೆ. ಈ ವೇಳೆ ಅನುರಾಧ ಅವರು ಜಿಲ್ಲೆಯ ಟಾಟಾ ಕಂಪೆನಿಯಲ್ಲಿ ಹಣ ಪಾವತಿ ಮಾಡುವುದಾಗಿ ಪ್ರತ್ಯುತ್ತರ ನೀಡಿ ಅನಾಮಿಕ ವ್ಯಕ್ತಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.ಕೊನೆಗೆ ದಿಕ್ಕು ತೋಚದೆ ಆತ ಅಶ್ಲೀಲ ಶಬ್ದಗಳಿಂದ ಬೈದು ಕರೆ ಕಡಿತಗೊಳಿಸಿದ್ದಾನೆ.
ಈ ಬಗ್ಗೆ “ಕಡಬ ಟೈಮ್ಸ್ “ ಜೊತೆ ಮಾತನಾಡಿದ ಅನುರಾಧ ಅವರು ಹಣದ ವಿಚಾರ ಅಥವಾ ಬಹುಮಾನ ವಿಚಾರದಲ್ಲಿ ಯಾವುದೇ ಪತ್ರ ಅಥವಾ ಪೋನ್, ಸಂದೇಶ ಬಂದರೂ ಅಪರಿಚಿತರೊಂದಿಗೆ ವ್ಯವಹರಿಸಬೇಡಿ.ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿ .ಅಲ್ಲದೆ ಮೊಸದ ಜಾಲಕ್ಕೆ ಸಿಲುಕದಿರಿ ಎಂದಿದ್ದಾರೆ.