




ಕಡಬ ಟೈಮ್ಸ್ (KADABA TIMES):ಕಾಂಗ್ರೆಸ್ ಸರ್ಕಾರ, ಮೈತ್ರಿ ಸರ್ಕಾರ, ಈ ಹಿಂದಿನ ಬಿಜೆಪಿ ಸರ್ಕಾರದಲ್ಲೂ ಸಹ ಮರಳು ನೀತಿ ಸರಿಪಡಿಸಲು ಕಷ್ಟವಾಗಿತ್ತು. ಆದರೆ ಈಗ ನಳೀನ್ ಕುಮಾರ್ ಕಟೀಲ್ ನವೆಂಬರ್ 1ರಿಂದ ಎರಡು ಸಾವಿರ ರೂಗೆ ಮರಳು ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಖಂಡಿತವಾಗಿಯೂ ಸಾಧ್ಯವಾಗುವ ಕೆಲಸವೇ? ಎಂದು ಪುತ್ತೂರು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಲ ಘಟ್ಟದಲ್ಲಿ, ಅದರಲ್ಲೂ ಮರಳಿನ ಸಮಸ್ಯೆ ಎಲ್ಲೆಡೆ ಹೆಚ್ಚಿದೆ. ಈ ಕಾಲದಲ್ಲಿ ಕೇವಲ ಎರಡು ಸಾವಿರ ರೂಗೆ ಒಂದು ಲೋಡ್ ಮರಳು ಪೂರೈಸಲು ನಮ್ಮ ಸಂಸದರಿಂದ ಮಾತ್ರ ಸಾಧ್ಯ. ಇಂತಹ ಸಂಸದರನ್ನ ಪಡೆದ ನಾವೇ ಪುಣ್ಯವಂತರು. ಬಿಜೆಪಿ ಪಕ್ಷ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ವಲಯಗಳನ್ನು ಮಾರಾಟ ಮಾಡಿರುವ ದುಡ್ಡಿನಲ್ಲಿ ಇಷ್ಟು ಕಡಿಮೆ ಬೆಲೆಗೆ ಮರಳು ನೀಡಬಹುದು ಎಂದು ವ್ಯಂಗ್ಯವಾಡಿದರು.

ನಮ್ಮ ಜಿಲ್ಲೆಯಲ್ಲಿ ಯಾರಿಗಾದರೂ ಮರಳಿನ ಅವಶ್ಯಕತೆ ಇದ್ದಲ್ಲಿ ನಳೀನ್ ಕುಮಾರ್ ಕಟೀಲ್ಗೆ ಕರೆ ಮಾಡಿ ಕೇಳಬಹುದು. ಕಾಂಗ್ರೆಸ್ ಪಕ್ಷದಿಂದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಾವು ಸಂಸದರ ದೂರವಾಣಿ ಸಂಖ್ಯೆಯನ್ನು ಎಲ್ಲರಿಗೂ ನೀಡುತ್ತಿದ್ದೇವೆ, ಜನರು ಅವರಿಗೆ ಕರೆ ಮಾಡಿದರೆ ಸಾಕು ನಿಮ್ಮ ಸ್ಥಳಕ್ಕೆ ಕೇವಲ 2000ರೂ ಗೆ ಒಂದು ಲೋಡ್ ಮರಳು ದೊರೆಯಲಿದೆ ಎಂದು ಹೇಳಿದರು.