




ಕಡಬ ಟೈಮ್ಸ್ (KADABA TIMES):ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಬೆಳಂದೂರು ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕ್ರೀಯಾ ಯೋಜನೆಯಡಿಯಲ್ಲಿ ರೈತರ ಕ್ರಿಯಾಯೋಜನೆ ತಯಾರಿ ಕುರಿತು ವಿಶೇಷ ಗ್ರಾಮ ಸಭೆಯು ಬೆಳಂದೂರು ಗ್ರಾ.ಪಂ, ಸಭಾಂಗಣದಲ್ಲಿ ನಡೆಯಿತು.

ಬೆಳಂದೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಜೈಪ್ರಕಾಶ್ ಮಾಹಿತಿ ನೀಡಿದರು. ಜಿ.ಪಂ, ಸದಸ್ಯೆ ಪ್ರಮೀಳಾ ಜನಾರ್ದನ, ತಾ.ಪಂ, ಸದಸ್ಯೆ ಲಲಿತಾ ಈಶ್ವರ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಸ್ವಾಗತಿಸಿ, ವಂದಿಸಿದರು. ಗ್ರಾ.ಪಂ, ಸಿಬ್ಬಂದಿಗಳಾದ ಹರ್ಷಿತ್ ಕೂರ, ಸಂತೋಷ್, ಗೀತಾ, ಮಮತಾ, ಪ್ರಶಾಂತಿ, ವಿಮಲ ಸಹಕರಿಸಿದರು.