




ಕಡಬ ಟೈಮ್ಸ್ (KADABA TIMES):ಪಂಜ ಗ್ರಾ.ಪಂ ವಾಣಿಜ್ಯ ಸಂಕೀರ್ಣ ಮತ್ತು ಬಸ್ ತಂಗುದಾಣಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಗೊಂಡಿದ್ದು ಇದರ ಉದ್ಘಾಟನೆಯು ಸೋಮವಾರ ನಡೆದಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ರವರು ದೀಪ ಬೆಳಗಿಸಿ, ತೆಂಗಿನಕಾಯಿ ಒಡೆದು ಉದ್ಘಾಟಿಸಿದರು.

ಕಾಂಕ್ರೀಟಿಕರಣ ಶಾಶ್ವತ ಕಾಮಗಾರಿಗೆ ಶಾಸಕರು 10 ಲಕ್ಷ .ರೂ. ,ಸಂಸದ ನಳಿನ್ ಕುಮಾರ್ ಕಟೀಲ್ ಅವರು 5. ಲಕ್ಷ .ರೂ. ಅನುದಾನ ಒದಗಿಸಿದ್ದರು. ಇಲ್ಲಿ 4.90 ಲಕ್ಷ. ರೂ.ವೆಚ್ಚದಲ್ಲಿ ರಸ್ತೆ ಬದಿ ತಡೆ ಗೋಡೆ ಮತ್ತು ಇಂಟರ್ ಲಾಕ್,4.90 ಲಕ್ಷ .ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಕೂಬ್ರಿಜ್ , 2 ಲಕ್ಷ. ರೂ.ವೆಚ್ಚದಲ್ಲಿ ಹೂವಿನ ಮಾರುಕಟ್ಟೆ ಕಾಮಗಾರಿಯು ಪಂಜ ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಾಣವಾಗಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು.