




ಕಡಬ ಟೈಮ್ಸ್ (KADABA TIMES):ಕಾಣಿಯೂರು:ಜಾನುವಾರುಗಳಿಗೆ ಉಚಿತ ಕಾಲು ಬಾಯಿ ಲಸಿಕೆ ನೀಡುವ ಕಾರ್ಯಕ್ರಮ ಕಾಣಿಯೂರು ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ದ.ಕ ಜಿಲ್ಲಾ ಹಾಲು ಒಕ್ಕೂಟ ಮತ್ತು ಪಶುಸಂಗೋಪನಾ ಇಲಾಖೆ ಇದರ ವತಿಯಿಂದ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದೊಂದಿಗೆ ಸಂಘದ ವ್ಯಾಪ್ತಿಗೆ ಒಳಪಡುವ ಬೆಳಂದೂರು, ಕಾಣಿಯೂರು ಗ್ರಾಮಗಳಲ್ಲಿ ಈ ಲಸಿಕೆ ನೀಡಲಾಯಿತು.

ಇದೇ ವೇಳೆ ಜಾನುವಾರುಗಳಿಗೆ ಜಂತುಹುಳ ನಿವಾರಣಾ ಔಷಧಿಯನ್ನು ಸಂಘದ ಸದಸ್ಯರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಂಘದ ಕೃತಕ ಗರ್ಭಧಾರಣ ಕಾರ್ಯಕರ್ತರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.