




ಕಡಬ ಟೈಮ್ಸ್ (KADABA TIMES):ಕಡಬದ ಮುಖ್ಯ ಪೇಟೆಯ ಪಿಕ್ ಅಪ್ ನಿಲ್ದಾಣ ಮುಂಭಾಗದ ಶ್ರೀ ಲಕ್ಷ್ಮೀ ಟವರ್ಸ್ ನಲ್ಲಿ ಗುರುವಾರದಂದು ಗೋಗ್ರೀನ್ ಮೋಟರ್ಸ್ ಇಲೆಕ್ಟ್ರೀಕಲ್ ಟೂ ವೀಲರ್ ಶೋರೂಮ್ ಉದ್ಘಾಟನೆಗೊಂಡಿತು.
ಜೆಸಿಐ ವಲಯಾಧಿಕಾರಿ ರವಿ ಕಕ್ಕೆಪದವು ಅವರು ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತೈಲ ಬೆಲೆ ಏರಿಳಿತಗಳ ನಡುವೆ ಪ್ರಸ್ತುತ ಜಾಯಮಾನಕ್ಕೆ ಬ್ಯಾಟರಿ ಚಾಲಿತ ವಾಹನಗಳು ಅಗತ್ಯವಾಗಿದೆ. ಪರಿಸರ ಸ್ನೇಹಿ ಇಲೆಕ್ಟ್ರೀಕಲ್ ವಾಹನಗಳ ಬಳಕೆ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ನಂತರ ನಡೆದ ಸಭಾ ಕಾರ್ಯಕಾರ್ಯಮದಲ್ಲಿ ಪ್ರಗತಿಪರ ಕೃಷಿಕ ಕೆ.ವಾಸುದೇವ ಗೌಡ ಕೊಳ್ಳೆ ಸಾಗು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿ ಈ ಸಂಸ್ಥೆಯ ಅಭಿವೃದ್ದಿಗೆ ಜನರ ಸಹಕಾರ ಅಗತ್ಯ ಎಂದರು. ಮುಖ್ಯ ಅಥಿಯಾಗಿ ಆಗಮಿಸಿದ ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪಿ.ವೈ ಕುಸುಮ ಅವರು ಮಾತನಾಡಿ ಗ್ರಾಮೀಣ ಭಾಗದ ಜನರು ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಒತ್ತು ನೀಡಬೇಕು. ಅಲ್ಲದೆ ಬ್ಯಾಟರಿ ಚಾಲಿತ ಓಡಾಡುವ ಇತರ ವಾಹನಗಳನ್ನು ಮುಂದೆಕ್ಕೆ ಅಭಿವೃದ್ಧಿ ಪಡಿಸಬೇಕು ಎಂದರು .
ಮಂಗಳೂರು ಸ್ಮಾರ್ಟ್ ಸಿಟಿ ಮೋಟಾರ್ಸ್ ಮ್ಯಾನೆಜ್ ಮೆಂಟ್ ಪಾರ್ಟ್ ನರ್ ಶ್ರೀ ಮತಿ ಪ್ರತಿಭಾ ಅವರು ಮಾತನಾಡಿ ಪರಿಸರ ಪೂರಕವಾಗಿರುವ ಬ್ಯಾಟರಿ ಚಾಲಿತ ವಾಹನಗಳ ಮಾರಾಟವನ್ನು ಕಳೆದ ಎರಡು ವರ್ಷದಿಂದ ಮುನ್ನಡೆಸುತ್ತಾ ಬಂದಿದ್ದೇವೆ.ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು ಈ ಹಿನ್ನೆಲೆಯಲ್ಲಿ ಹೊಸ ತಾಲೂಕು ಕೇಂದ್ರ ಕಡಬಕ್ಕೂ ವಿಸ್ತರಣೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಘಟಕದ ಅಧ್ಯಕ್ಷ ಶಿವ ಪ್ರಸಾದ್, ಕಡಬ ಸಿಟಿ ಮೋಟರ್ ಡೀಲರ್ಸ್ ನ ನರೇಂದ್ರ ಕುಮಾರ್ ಮತ್ತು ರಾಜೇಂದ್ರ ,ಟಿಕ್ನಿಷನ್ ಶ್ರೀನಿವಾಸ್ ಹಾಜರಿದ್ದರು. ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿಜನಾರ್ಧನ ಬಿ.ಎಲ್ ಧನ್ಯವಾದ ಸಮರ್ಪಿಸಿದರು.