




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಐತ್ತೂರು ಗ್ರಾ.ಪಂ ವ್ಯಾಪ್ತಿಯ ಮರ್ದಾಳ -ಕರ್ಮಾಯಿ ರಸ್ತೆಯಲ್ಲಿ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ನ್ನು ದುರಸ್ತಿ ಮಾಡಲಾಗಿದೆ.
ಪೈಪ್ ಲೈನ್ ಒಡೆದು ಪ್ರತಿದಿನ ರಸ್ತೆ ಪಕ್ಕದಲ್ಲಿ ನೀರು ಹರಿದು ಪೋಲಾಗುತ್ತಿರುವ ಬಗ್ಗೆ “ಐತ್ತೂರು: ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಭಾರೀ ಪ್ರಮಾಣದ ನೀರು ಪೋಲು” ಶೀರ್ಷಿಕೆ ಯಡಿ ನ.2 ಕಡಬ ಟೈಮ್ಸ್ ವೀಡಿಯೋ ಸಹಿತ ವರದಿ ಬಿತ್ತರಿಸಿತ್ತು.

ವರದಿಯನ್ನು ಗಮನಸಿದ ಗ್ರಾ.ಪಂ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಲು ಕ್ರಮ ಕೈಗೊಂಡಿದ್ದು, ನ.4 ರಂದು ಒಡೆದು ಹೋದ ಪೈಪನ್ನು ಬದಲಾಯಿಸಿ ಸರಿಪಡಿಸಿದ್ದಾರೆ.
ಎರಡು ತಿಂಗಳಿನಿಂದ ಕುಡಿಯುವ ನೀರು ರಸ್ತೆಯಲ್ಲಿಯೇ ನಿರಂತವಾಗಿ ನೀರು ಅಧಿಕ ಪ್ರಮಾಣದಲ್ಲಿ ಹರಿಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶವೂ ವ್ಯಕ್ತವಾಗಿತ್ತು.
ಅಧಿಕಾರಿಗಳ ಶೀಘ್ರ ಕ್ರಮಕ್ಕೆ ಅಲ್ಲಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.