ಹೆಸರಿಗಷ್ಟೇ ಕಡಬ ತಾಲೂಕು ಕೇಂದ್ರ: ಇಲಾಖೆಗಳು ಕಾರ್ಯನಿರ್ವಹಿಸದೆ ಜನರ ಅಲೆದಾಟ ತಪ್ಪಿಲ್ಲ!

ಹೆಸರಿಗಷ್ಟೇ ಕಡಬ ತಾಲೂಕು ಕೇಂದ್ರ: ಇಲಾಖೆಗಳು ಕಾರ್ಯನಿರ್ವಹಿಸದೆ ಜನರ ಅಲೆದಾಟ ತಪ್ಪಿಲ್ಲ!

Kadaba Times News
0

ಕಡಬ ಟೈಮ್ಸ್ (KADABA TIMES):ನೂತನವಾಗಿ ಅಸ್ತಿತ್ವಕ್ಕೆ ಬಂದ ಕಡಬ ತಾಲೂಕು ಮತ್ತು ಪಟ್ಟಣ ಪಂಚಾಯತ್ ಆಗಿರುವ ಕಡಬದಲ್ಲಿ ಸಮರ್ಪಕವಾಗಿ ವ್ಯವಸ್ಥೆಗಳು ಅನುಷ್ಟಾನವಾಗದೆ ಈ ಭಾಗದ ಜನರು ಅಲೆದಾಟ ಮಾಡುತ್ತಿರುವುದು ಕಂಡು ಬಂದಿದೆ.

ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿ ವರ್ಷ ಕಳೆದರೂ ಇನ್ನೂ   ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಲು ಸರಕಾರವಾಗಲೀ ಸಂಬಂಧಿಸಿದ ಇಲಾಖಾಧಿಕಾರಿಗಳು ಮುಂದಾಗುತ್ತಿಲ್ಲ. ಹೀಗಾಗಿ ಈ ಹಿಂದೆ ಇದ್ದ ಪುತ್ತೂರಿನ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಲ್ಲ ಎನ್ನುತ್ತಾರೆ ಈ ಭಾಗದ ನಾಗರಿಕರು. ಈ ನಡುವೆ  ಕಡಬ ತಾಲೂಕಿಗೆ ಸೇರಿದ  ರಾಜ್ಯದ ನಂಬರ್ ವನ್    ಕುಕ್ಕೆ ಸುಬ್ರಹ್ಮಣ್ಯ ದೇಗುಲದ ನಾಮ ಫಲಕವೂ ಸುಳ್ಯ ತಾಲೂಕು ಎಂಬ ಅಡಿಬರಹದಲ್ಲೇ ಮುಂದುವರೆದಿದೆ.

ಗ್ರಾಮೀಣ ಪ್ರದೇಶಗಳನ್ನು  ಒಳಗೊಂಡಿರುವ ಕಡಬ ಈಗ  ಪಟ್ಟಣ ಪಂಚಾಯತ್ ಆಗಿ ಬದಲಾವಣೆ ಆಗಿದೆ. ಒಂದು ಗ್ರಾಮೀಣ ಪ್ರದೇಶ ಪಟ್ಟಣ ಪಂಚಾಯತ್ ಆಗಿ ಬದಲಾವಣೆ ಆಗಬೇಕಾದರೆ ಅಲ್ಲಿನ ವಿದ್ಯುತ್, ಕುಡಿಯುವ ನೀರು,  ಇದೆಲ್ಲಾ ಸಮರ್ಪಕವಾಗಿ ಇಲ್ಲ ಎಂಬುದು ಸಾರ್ವಜನಿಕ ಆರೋಪ. ವಿವಿಧ ವಿಚಾರದಲ್ಲಿ  ತೆರಿಗೆಗಳನ್ನು ಹೆಚ್ಚುವರಿ ಮಾಡಲಾಗುತ್ತಿದೆ.

ಉದಾಹರಣೆಗೆ ಇಲ್ಲಿನ ಸ್ಥಳೀಯ ಬ್ಯಾಂಕ್ ಗಳಲ್ಲಿ ಈ ಹಿಂದೆ ರೂ 250 ರಿಂದ 500 ಹಣವಿದ್ದರೆ ಹೊಸ ಖಾತೆ ಆರಂಭಿಸಬಹುದಿತ್ತು. ಆದರೆ ಅದು ಈಗ ಇದು 500 ರಿಂದ 1,000 ಸಾವಿರಕ್ಕೆ ಬದಲಾಗುತ್ತಿದೆ.ಇದರಿಂದಾಗಿ ವಿವಿಧ ವಿದ್ಯಾರ್ಥಿ ವೇತನ, ವಿಧವಾ ವೇತನ,ವೃದ್ಧಾಪ್ಯ ವೇತನ ಸೇರಿದಂತೆ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವ ಗ್ರಾಮೀಣ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಇಷ್ಟು ಮಾತ್ರವಲ್ಲದೆ ಮನೆ ತೆರಿಗೆ,ನೀರಿನ ಬಿಲ್,ವಿದ್ಯುತ್ ಬಿಲ್,ವಿವಿಧ ತೆರಿಗೆಗಳನ್ನು, ಕಟ್ಟಡ ತೆರಿಗೆಗಳನ್ನು ಪಟ್ಟಣ ಪಂಚಾಯತ್ ನಿಯಮಾನುಸಾರ ಹೆಚ್ಚಿಸಲಾಗುತ್ತಿದೆ.ಮಾತ್ರವಲ್ಲದೆ ಈ ಬಿಲ್ ಗಳನ್ನು ಕಟ್ಟಲು ಪಂಚಾಯತ್ ನಲ್ಲಿ ವ್ಯವಸ್ಥೆ ಮಾಡಲಾಗಿಲ್ಲ. ಬ್ಯಾಂಕ್ ನಲ್ಲಿ ಕಟ್ಟಬೇಕು. ಇದು ಸ್ಥಳೀಯ ಗ್ರಾಮೀಣ ಜನರಿಗೆ ತೊಂದರೆ ಆಗುತ್ತಿದೆ.

.ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ಪಟ್ಟಣ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು   ಶ್ರಮಿಸಬೇಕಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top