




ಕಡಬ ಟೈಮ್ಸ್ (KADABA TIMES):ಕಡಬದ ಅಂಚೆ ಕಚೇರಿ ಬಳಿ ಇರುವ ಅಕ್ಷಯ ಕಾಂಪ್ಲೆಕ್ಸ್ ನಲ್ಲಿ ಜಯಶ್ರೀ ದೋನಿಗಂಡಿ ಮಾಲಕತ್ವದ ಯೋಗ್ಯ ಟೈಲರಿಂಗ್ ಗಾರ್ಮೆಂಟ್ಸ್ &ಫ್ಯಾನ್ಸಿ ಸೋಮವಾರ ಶುಭಾರಂಭಗೊಂಡಿತು.
ಆಲಂಕಾರು ಮೋಗೆರ ಸಂಘದ ಸಲಹೆಗಾರರಾದ ಕೃಷ್ಣ ಗಾಣಂತಿ ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಬಳಿಕ ದೀಪಬೆಳಗಿಸಿದರು. ಸಂಸ್ಥೆಯ ಮಾಲಕಿ ಜಯಶ್ರೀ ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿ ಈ ಸಂಸ್ಥೆಯಲ್ಲಿ ಮುಖ್ಯವಾಗಿ ಬಟ್ಟೆ ಚೀಲಗಳನ್ನು ಜನರ ಬೇಡಿಕೆಗೆ ಅನುಗುಣವಾಗಿ ಮಾಡಿಕೊಡಲಾಗುತ್ತಿದೆ. ಪ್ಲಾಸ್ಟಿಕ್ ಚೀಲ ಬಿಟ್ಟು ಬಟ್ಟೆ ಚೀಲವನ್ನು ಉಪಯೋಗಿಸಲು ಮುಂದಾಗಬೇಕು. ಅಲ್ಲದೆ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಟೈಲರಿಂಗ್ ತರಬೇತಿಯನ್ನು ನೀಡಲಾಗುವುದು ಎಂದರು.

ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಸದಸ್ಯ ಕರಿಯ ಗಾಣಂತಿ, ಮೊಗೇರ ಸಂಘದ ಕಾರ್ಯದರ್ಶಿ ದಿನೇಶ್ ಗಾಣಂತಿ, ಶಿಕ್ಷಕ ಶಂಕರ್ ಪಡುಬೆಟ್ಟು ಶುಭ ಹಾರೈಸಿದರು. ದಿನೇಶ್ ನೆಕ್ಕಿಲಾಡಿ, ಕುಮಾರಿ ದೀಪಿಕಾ ಗಾಣಂತಿ,ಹರೀಶ್ ಕೆರ್ನಡ್ಕ ಶುಭ ಹಾರೈಸಿದರು.ಆನಂದ ದೋಣಿಗಂಡಿ ಮತ್ತು ಯೋಗ್ಯ ಅಥಿತಿಗಳಿಗೆ ಬಟ್ಟೆ ಚೀಲ ನೀಡಿದರು.