




ಕಡಬ ಟೈಮ್ಸ್ (KADABA TIMES):ನಿಲ್ಲಿಸಿದ್ದ ಕಾರಿನ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಕಾರು ನಜ್ಜುಗುಜ್ಜಾದ ಘಟನೆ ಪಂಜದಲ್ಲಿ ಗುರುವಾರ ರಾತ್ರಿ ನಡೆದಿದೆ
ಪಂಜ ಪೇಟೆಯ ಸಮೀಪ ಕಾರ್ ವರ್ಕಶಾಪ್ ಬಳಿ ಪಾರ್ಕಿಂಗ್ ಮಾಡಿದ್ದ ಕಾರಿನ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ಹಾನಿಯಾಗಿದೆ.

ಪಂಜದ ರಮೇಶ್ ಪುತ್ಯ ಅವರು ನಿನ್ನೆ ಬೆಳಗ್ಗೆಯಷ್ಟೇ ಈ ಕಾರ್ ಅನ್ನು ಖರೀದಿಸಿದ್ದು, ಮಾರುತಿ ಎಸ್ಟೀಮ್ ಕಾರೊಂದನ್ನು ಪಂಜ ಸಿ.ಎ. ಬ್ಯಾಂಕ್ ಸಮೀಪದ ಮಾರುತಿ ಗ್ಯಾರೇಜ್ ಬಳಿ ರಸ್ತೆ ಬದಿ ನಿಲ್ಲಿಸಿದ್ದರು. ನಿನ್ನೆ ತಡರಾತ್ರಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಜನ ಸಂಚಾರವಿಲ್ಲದ ವೇಳೆ ಬಿದ್ದ ಪರಿಣಾಮ ಸಂಭಾವ್ಯ ಅಪಾಯವೂ ತಪ್ಪಿದೆ.