




ಕಡಬ ಟೈಮ್ಸ್ (KADABA TIMES):ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಎನ್.ಪಿ.ಇ.ಪಿ. ರಾಷ್ಟ್ರೀಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ನಂದನ್.ವೈ.ಬಿ, ಪವನ್ ಕುಮಾರ್.ಎನ್, ಅಶ್ವಿತ್.ಎ, ಸಿಂಚನಾ.ಎ, ಕೀರ್ತಿ.ಕೆ.ಬಿ, ಸುದೀಪ್.ಕೆ ಹಾಗೂ ನಿಖಿಲ್.ಎನ್ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.