




ಕಡಬ ಟೈಮ್ಸ್ (KADABA TIMES):ಎಸ್.ಎಸ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ತಯಾರಾದ ಸಂತೋಷ್.ಪಿ ಕಡಬ ರಚಿಸಿ ಹಾಡಿರುವ ಕೊರಗಜ್ಜ ದೈವದ ಭಕ್ತಿ ಆಲ್ಬಂ ಹಾಡು ಶನಿವಾರ ಹಿರೆಬಂಡಾಡಿ ನೆಹರು ತೋಟದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು.
ಸ್ವಾಮಿಕೊರಗಜ್ಜ ಕ್ಷೇತ್ರದ ಸಮಿತಿ ಅಧ್ಯಕ್ಷ ಆದಿರಾಜ ಗೌಡ ಶಾಂತಿತ್ತಡ್ಡ ಬಿಡುಗಡೆಗೊಳಿಸಿ ಶುಭ ಹಾರೈಸಿದರು .ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ದೈವದ ಮದ್ಯಸ್ಥರಾದ ವಿನೋದ್ ಅಡೆಕಲ್ ಅವರು, ತುಳುನಾಡಿನಲ್ಲಿ ಕರ್ಣಿಕ ದೈವವಾಗಿ ಜನರ ಇಷ್ಟಾರ್ಥಗಳನ್ನು ನೆರವೇರಿಸುವ ಸ್ವಾಮಿ ಕೊರಗಜ್ಜನ ಕುರಿತ ಹಾಡು ಬಿಡುಗಡೆಗೊಂಡಿರುವುದು ಸಂತೋಷ ತಂದಿದೆ. ನಮ್ಮೂರಿನ ವಿವಿಧ ಕ್ಷೇತ್ರಗಳ ಭಕ್ತಿ ಭಾವದ ಹಾಡುಗಳು ಎಸ್. ಎಸ್. ಮೀಡಿಯಾ ಮುಖೇನ ಇನ್ನಷ್ಟು ಮೂಡಿಬರಲಿ ಎಂದು ಶುಭ ಹಾರೈಸಿದರು.
ಸಮಿತಿಯ ಪದಾಧಿಕಾರಿಗಳಾದ ನಾಗರಾಜ ಗೌಡ ಸೀಂಕ್ರಕೊಡಂಗೆ,ಪ್ರಶಾಂತ್ ಕರೆಂಕಿ,ಪ್ರವೀಣ್ ನೆಹರುತೋಟ, ಪ್ರವೀಣ್ ವಳಕಡಮ್ಮ,ಪ್ರಸನ್ನ ನೆಹರು ತೊಟ,ಸತೀಶ್ ವಳಕಡಮ್ಮ ಉಪಸ್ಥಿತರಿದ್ದರು. ಆಲ್ಬಂ ಹಾಡು ನಿರ್ಮಾಣ ಮಾಡಿದ ಸಂತೋಷ್.ಪಿ ಕಡಬ ಪ್ರಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಶಿವಾನಂದ.ಕೆ ಪಟ್ನ ಧನ್ಯವಾದ ಸಲ್ಲಿಸಿದರು. ವಿ.ಕೆ ಕಡಬ,ಯಶವಂತ್ ಪಟ್ನ, ರಂಜಿತ್( ಡ್ರೀಮ್ ಇವೇಂಟ್) ಕಾರ್ಯಕ್ರಮ ನಿರ್ವಹಿಸಿದರು.

ವಿಡೀಯೊ ಇಲ್ಲಿ ನೊಡೀ: