




ಕಡಬ ಟೈಮ್ಸ್ (KADABA TIMES):ಲಾಡು ಕರ್ಪೂರ ವಾಸನೆ ಬರುತ್ತಿರುವ ಬಗ್ಗೆ ಅಂಗಡಿ ಮಾಲೀಕ ಲಾಡು ವಿತರಣೆ ಮಾಡುವಾತನಿಗೆ ತಿಳಿಸಿದಾಗ ಲಾಡು ಪೂರೈಕೆದಾರನೊಬ್ಬ ದಮ್ಕಿ ಹಾಕಿರುವ ಪ್ರಸಂಗ ಶನಿವಾರ ಕಡಬದಲ್ಲಿ ನಡೆದಿದೆ.
ಕಾಲೇಜು ರಸ್ತೆಯ ಅಂಗಡಿಯೊಂದರಲ್ಲಿ ಗ್ರಾಹಕರ ಬೇಡಿಕೆಯಂತೆ ಅಂಗಡಿ ಮಾಲೀಕ ಲಾಡು ಖರೀದಿಸಿದ್ದರು. ಈ ಲಾಡುಗಳೆಲ್ಲ ಕರ್ಪೂರದ ವಾಸನೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಪೂರೈಕೆದಾರನ ಬಳಿ ಈ ವಿಚಾರವನ್ನು ಪೋನಿನಲ್ಲಿ ತಿಳಿಸಿದ್ದರು.ಇದರಿಂದ ಕುಪಿತಗೊಂಡ ಲಾಡು ಪೂರೈಕೆದಾರ ನಾಳೆ ನಿನ್ನ ಅಂಗಡಿಯೇ ಇರಲ್ಲ… ಅಂತ ಅವಾಝ್ ಹಾಕಿದ್ದಾನೆ ಎನ್ನಲಾಗಿದೆ.

ಜನರು ಖರೀದಿಸಿ ತಿನ್ನುವ ತಿನಿಸಿನ ಗುಣಮಟ್ಟವನ್ನು ಅಂಗಡಿಯಾತ ತಿಳಿಸಿದಾಗ ಲಾಡು ಪೂರೈದಾರ ಭಿನ್ನವಾಗಿ ಪ್ರತಿಕ್ರಿಯೆ ನೀಡಿದಿರುವುದನ್ನು ಕೇಳಿ ಅಂಗಡಿ ಮಾಲೀಕ ಅಚ್ಚರಿಗೊಂಡಿದ್ದಾರೆ.