




ಕಡಬ ಟೈಮ್ಸ್ (KADABA TIMES):ಕಾಂಗ್ರೆಸ್‌ಗೆ ಚುನಾವಣೆಯನ್ನು ಎದುರಿಸುವ ಶಕ್ತಿಯೇ ಇಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಲೇವಡಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಪಧಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ”ಕಾಂಗ್ರೆಸ್‌ನವರೇ ತಮ್ಮ ಪಕ್ಷಕ್ಕೆ ಸೇರಿದ ಪರಿಶಿಷ್ಟ ಜಾತಿಯ ಶಾಸಕನ ಮನೆಗೆ ಬೆಂಕಿ ಹಾಕುವ ಕೆಲಸ ಮಾಡಿದ್ದಾರೆ. ಅವರನ್ನು ಬಂಧಿಸುವಂತೆ ಹೇಳಲು ಕೂಡಾ ಆ ಪಕ್ಷದ ಅಧ್ಯಕ್ಷರಿಗೆ ಆಗುತ್ತಿಲ್ಲ” ಎಂದು ಟೀಕಿಸಿದ್ದಾರೆ.

”ಉಪ ಚುನಾವಣೆ ನಡೆಯುವ ಶಿರಾ ಹಾಗೂ ಆರ್‌ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮೇಲೆ ಹೆಚ್ಚು ಒಲವಿದೆ. ನಾವೇ ಎರಡೂ ಕಡೆ ಗೆಲುವು ಸಾಧಿಸುತ್ತೇವೆ. ವಿಧಾನ ಪರಿಷತ್ತಿನಲ್ಲೂ ನಾಲ್ಕು ಸ್ಥಾನ ನಮ್ಮ ಪಾಲಾಗಿದೆ” ಎಂದು ಹೇಳಿದ ಅವರು, ”ಗ್ರಾಮ ಪಂಚಾಯಿತಿ ಚುನಾವಣೆಗೆ ಎಲ್ಲಾ ತಯಾರಿಯಾಗಿದ್ದು ಕರ್ನಾಟಕದಲ್ಲಿ 224 ಕ್ಷೇತ್ರ ನಮ್ಮ ಗುರಿ” ಎಂದು ಹೇಳಿದ್ದಾರೆ.