




ಕಡಬ ಟೈಮ್ಸ್ (KADABA TIMES):ಮೆಲ್ಕಾರ್ ನಲ್ಲಿ ಶುಕ್ರವಾರ ರಾತ್ರಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಮಾಹಿತಿ ಆಧಾರಿಸಿ ಬೆನ್ನಟ್ಟಿ ಬಂಧಿಸಲು ಹೋದಾಗ ಆರೋಪಿಗಳಲ್ಲಿ ಓರ್ವನಾದ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿರುವ ಘಟನೆ ಕಡಬ ತಾಲೂಕಿನ ಗುಂಡ್ಯದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಮತ್ತು ಕೊಲೆ ಆರೋಪಿ ಖಲೀಲ್ ಗೆ ್ಗಾಯವಾಗಿದ್ದು,ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅರೋಪಿಗಳು ಓಡಲು ಯತ್ನಿಸಿದಾಗ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.

ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಕೊಲೆ ಆರೋಪಿಗಳ ತನಿಖಾಧಿಕಾರಿಯಾಗಿದ್ದರು. ಆ ಹಿನ್ನಲೆಯಲ್ಲಿ ನಟೋರಿಯಸ್ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾದ ವೇಳೆ ಪೋಲೀಸರ ಮೇಲೆ ದಾಳಿಗೆ ಮುಂದಾಗಿದ್ದ ಆರೋಪಿಗಳಿಗೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಾದ ಹಫೀಜ್ ಮತ್ತು ಇನ್ನೊಬ್ಬ ಆರೋಪಿ ಗುಡ್ಡಕ್ಕೆ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಈತನ ಬಂಧನಕ್ಕೆ ಮುಂದಾಗಿದ್ದಾರೆ.ಬಂಧನಕ್ಕೆ ಒಳಗಾಗಿರುವ್ ಖಲೀಲ್ ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಗೆ ಈತ ಪ್ರಮುಖನಾಗಿದ್ದ ಎನ್ನಲಾಗಿದೆ . ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಇತ್ತೀಚಿಗೆ ಈತನ ಗಡಿಪಾರು ಕೂಡ ಆಗಿತ್ತು. ಕಲ್ಲಡ್ಕ ಇತ್ತೀಚಿಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು.