




ಕಡಬ ಟೈಮ್ಸ್ (KADABA TIMES):ಕೊಕ್ಕಡ : ಇಲ್ಲಿಯ ಹಲ್ಲಿಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಕ್ಕಡದ ಕೃಷ್ಣಾನಂದ ಯಾನೆ ಕಿಣಿ, ಸಿದ್ದಿಕ್, ಇಚಿಲಂಪಾಡಿಯ ವಿನೋದ್ ಬಂಧಿತ ಆರೋಪಿಗಳು . ಕಂಪ್ಯೂಟರ್ ಕೊಠಡಿ, ಬಿಸಿಯೂಟದ ಕೊಠಡಿ ಮತ್ತು ತರಗತಿ ಕೊಠಡಿಗಳ ಬೀಗವನ್ನು ಮುರಿದು 2 ಕಂಪ್ಯೂಟರ್ , ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದರು.

ಅ. 20 ರಂದು ಕಳವಾಗಿರುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಧರ್ಮಸ್ಥಳ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ತನಿಖೆ ಯನ್ನು ಕೈ ಗೆತ್ತಿಕೊಂಡ ಧರ್ಮಸ್ಥಳ ಠಾಣಾ ಉಪನಿರೀಕ್ಷಕ ಪವನ್ ನಾಯಕ್ ರವರ ತಂಡ ಸದ್ರಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ ಸೊತ್ತು ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.