




ಕಡಬ ಟೈಮ್ಸ್ (KADABA TIMES):ರಾಷ್ಟ್ರೀಯ ಹೆದ್ದಾರಿ 75 ರ ಬಿಸಿರೋಡ್ ನಿಂದ ಗುಂಡ್ಯ ವರೆಗೆ ಹೆದ್ದಾರಿ ಹದಗೆಟ್ಟಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕಡಬದ ನೀತಿ ಸಂಘಟನೆ ಶನಿವಾರ ಮನವಿ ಸಲಲ್ಲಿಸಿದೆ.
ಕಡಬ ಉಪ ತಹಶೀಲ್ದಾರ್ ಮನೋಹರ್ ಅವರ ಮೂಲಕ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು ಹೆದ್ದಾರಿಯುದ್ದಕ್ಕೂ ಗುಂಡಿಗಳಿದ್ದು ಸವಾರರಿಗೆ ಅಪಾಯ ಇರುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ ಉಪಸ್ಥಿತರಿದ್ದರು. ನೀತಿ ತಂಡದ ಪ್ರಮೋದ್, ಜಿಲ್ಲಾ ಅಧ್ಯಕ್ಷ ಜೋಸ್ ತೋಮಸ್ , ತಾಲೂಕು ಅಧ್ಯಕ್ಷ ರಂಜಿತ್ ಹಾಜರಿದ್ದರು.