




ಕಡಬ ಟೈಮ್ಸ್ (KADABA TIMES):ಪಂಜ: ಗ್ರಾ.ಪಂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗ್ರಾಮದ ಮೂಲ ಸೌಕರ್ಯ ಗಳಲ್ಲಿ ಒಂದಾಗಿರುವ ರಸ್ತೆ ಬಗ್ಗೆ ಗುತ್ತಿಗಾರಿನ ಪ್ರಜ್ಞಾವಂತ ನಾಗರೀಕರು ಪಕ್ಷ ಭೇದ ಮರೆತು ಧ್ವನಿ ಎತ್ತಿರುವುದಕ್ಕೆ ಸ್ಪಂದನೆ ದೊರಕಿದೆ.
ಇದೀಗ ಗುತ್ತಿಗಾರು ಕಮಿಲ ಬಳ್ಪ ರಸ್ತೆಯು ಗುತ್ತಿಗಾರಿನಿಂದ ಆರಂಭಗೊಂಡು ಕಾಂಕ್ರೀಟ್ ಕೆಲಸ ಆರಂಭ ಮಾಡುವ ಮೂಲಕ ಗ್ರಾಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಮಾಹಿತಿ ಪ್ರಕಾರ ಪಿಡ್ಯ್ಲೂಡಿ ಅನುದಾನ ರೂ. 80 ಲಕ್ಷ ಅನುದಾನದಲ್ಲಿ 800ಮೀ ರಸ್ತೆ ಕಾಂಕ್ರೀಟ್ ನಡೆಯಲಿದೆ. ಇದರಲ್ಲಿ ಚತ್ರಪ್ಪಾಡಿ ಬಳಿ ಏರು ರಸ್ತೆಯನ್ನು ತಗ್ಗಿಸುವ ಕೆಲಸವೂ ನಡೆಯಲಿದೆ. ಇದಲ್ಲದೆ ಬೇರೊಂದು ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು, ಮತ್ತೆ 500 ಮೀಟರ್ ಕಾಂಕ್ರೀಟ್ ನಡೆಯಲಿದ್ದು, ಸದ್ಯಕ್ಕೆ ಒಟ್ಟಾಗಿ 1.3 ಕಿ.ಮೀ ರಸ್ತೆ ಕಾಂಕ್ರೀಟಿಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.