ಕೋಡಿಂಬಾಳ:ರೈಲ್ವೇ ಹಳಿ ಸಮೀಪ ಯುವಕನ ಮೃತ ದೇಹ ಪತ್ತೆ

ಕೋಡಿಂಬಾಳ:ರೈಲ್ವೇ ಹಳಿ ಸಮೀಪ ಯುವಕನ ಮೃತ ದೇಹ ಪತ್ತೆ

Kadaba Times News

ಕಡಬ ಟೈಮ್ಸ್, ಕೋಡಿಂಬಾಳ:ರೈಲು ಮಾರ್ಗಕ್ಕೆ ತಾಗಿಕೊಂಡೇ ಇರುವ ಸ್ಥಿತಿಯಲ್ಲಿ ಯುವಕನೋರ್ವನ ಮೃತ ದೇಹ ಕೋಡಿಂಬಾಳದಲ್ಲಿ ಮಂಗಳವಾರ ಮುಂಜಾನೆ ಕಂಡುಬಂದಿದೆ.

ಮೃತ ಯುವಕ ಪಂಜ ಸಮೀಪದ ನೇಲ್ಯಡ್ಕ ನಿವಾಸಿ ವಿನೀತ್ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಿಗ್ಗೆ ಕೋಡಿಂಬಾಳ ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂ ಬಳಿ ರೈಲು ಢಿಕ್ಕಿ ಹೊಡೆದು ಹಳಿಗೆ ಬಿದ್ದ ಸ್ಥಿತಿಯಲ್ಲಿ ವಿನೀತ್ ನ ಮೃತದೇಹವು ಕಂಡುಬಂದಿದೆ.

ಪ್ಲಾಟ್ ಫಾರಂ ನಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಕೆಳಗಡೆ ಬಿದ್ದ ವೇಳೆ ರೈಲು ಢಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈಲ್ವೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top