Medicines- ಈ ಎಂಟು ಮಾತ್ರೆಗಳನ್ನು ಉಪಯೋಗಿಸದಂತೆ ಸೂಚನೆ: ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಮಾಹಿತಿ ನೀಡಲು ಮನವಿ

Medicines- ಈ ಎಂಟು ಮಾತ್ರೆಗಳನ್ನು ಉಪಯೋಗಿಸದಂತೆ ಸೂಚನೆ: ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಮಾಹಿತಿ ನೀಡಲು ಮನವಿ

Kadaba Times News
0

ಕಡಬ ತೈಮ್ಸ್, ಪ್ರಮುಖ ಸುದ್ದಿ;  ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಉತ್ತಮ ಗುಣಮಟ್ಟವಲ್ಲವೆಂದು 8 ಮಾತ್ರೆಗಳನ್ನು(ಟ್ಯಾಬ್ಲೆಟ್ಸ್) ಉಪಯೋಗಿಸಬಾರದು ಎಂದು ಶನಿವಾರದಂದು ಪ್ರಕಟನೆ ಹೊರಡಿಸಿದೆ.

 


ಹೆಲ್ತಿ ಲೈಫ್ ಫಾರ್ಮಾ ಪ್ರೈ. ಲಿಮಿಟೆಡ್‍ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಭವ್ಯ ಇಂಡೇಸ್ಟ್ರೀಸ್‍ನ ಆಕ್ಟಿವ್ ಅಲೂವೆರಾ ಮತ್ತು ನಿಮ್ ಸೋಪ್, ರಾಜ್‍ದೀಪ್ ಫಾರ್ಮಸ್ಯೂಟಿಕಲ್ಸ್‌ ಲೈಫೋಜೆಸಿಕ್, ಮೈಕ್ರೋ ಫಾರ್‌ ಮುಲೇಷನ್ಸ್‌ನ ಅಮೋಕ್ಸಿಲಿನ್ ಮತ್ತು ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಫಾರ್ಮಾಕೇರ್‌ ನ ಮೆಗ್ನೀಷಿಯಂ ಸಲ್ಫೇಟ್ ಪಾಸ್ಫೇಟ್ ಬಿಪಿ, ಡ್ಯಾಫೋಹಿಲ್ಸ್ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್‍ನ ಅಡಾಲ್ಪ್ಮಾಮ್ ಎಂಆರ್, ಮೆಡಿಸಿಸ್ ಬಯೋಟೆಕ್ ಪ್ರೈ. ಲಿಮಿಟೆಡ್‍ನ ಫೆರೋಸ್ ಅಸ್ಕ್ರೋಬೇಟ್, ಪಾಲಿಕ್ ಆಸಿಡ್ ಮತ್ತು ಜಿಂಕ್ ಸಲ್ಫೇಟ್ ಟ್ಯಾಬ್ಲೆಟ್‍ಗಳನ್ನು(ಆಲ್ಟೊಫರ್-ಎಕ್ಸ್‌ ಟಿ ಟ್ಯಾಬ್ಲೆಟ್ಸ್) ಉಪಯೋಗಿಸದಂತೆ ತಿಳಿಸಿದೆ.

 

ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು.


ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ಇಲಾಖೆಯು ತಿಳಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top