




ಕಡಬ: ಅಂಗಡಿಯ ಮುಂದೆ ನಿಂತಿದ್ದ ಮಹಿಳೆಯೋರ್ವರಿಗೆ ಹ*ಲ್ಲೆ ನಡೆಸಿರುವ ಬಗ್ಗೆ ಖಾಸಗಿ ದೂರಿನಂತೆ ನ್ಯಾಯಾಲಯದ ಆದೇಶದ ಮೇರೆಗೆ ಮೂವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟ್ರುಪಾಡಿ ಗ್ರಾಮದ ಕಲ್ಲೋಲಿಕ್ಕಲ್ ನಿವಾಸಿ ಸಾರಮ್ಮ ಎಂಬವರು
ಜುಲೈ 19ರ ರಾತ್ರಿ 7.30ರ ವೇಳೆಗೆ ಮುಳಿಮಜಲು ಎಂಬಲ್ಲಿ
ಮಗನ ಅಂಗಡಿ ಎದುರು ನಿಂತಿದ್ದರು. ಈ ವೇಳೆ ಅಟೋ ರಿಕ್ಷಾದಲ್ಲಿ ಬಂದ ಮೂವರು ಅವಾಚ್ಯ ಶಬ್ದಗಳಿಂದ ನಿಂದಿಸಿ,
ಜೀವ ಬೆದರಿಕೆ ಹಾಕಿರುವುದು ಅಲ್ಲದೆ ದೂಡಿ ಹಾಕಿ ಹ*ಲ್ಲೆ
ನಡೆಸಿದ್ದಾರೆ ಎಂದು ಆರೋಪಿಸಿ ಕಡಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಬಗ್ಗೆ ಮಹಿಳೆಯು ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಎನ್ ಸಿ ದಾಖಲಿಸಿಕೊಂಡು
ಹಿಂಬರಹ ನೀಡಿದ್ದರು. ಬಳಿಕ ನ್ಯಾಯಾಲಯಕ್ಕೆ
ಖಾಸಗಿ ದೂರು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ಪ್ರಕರಣ
ದಾಖಲಿಸಲು ಅನುಮತಿ ನೀಡಿದೆ .
ಅದರಂತೆ ಕುಟ್ರುಪಾಡಿ ಗ್ರಾಮದ ಕೋಡಿಬೈಲು ನಿವಾಸಿಗಳಾದ ಜಗನ್ನಾಥ ರೈ,
ಪುಷ್ಪಾ, ಪ್ರಜಾಲಕ್ಷ್ಮೀ ವಿರುದ್ದ ಕಡಬ ಠಾಣೆಯಲ್ಲಿ ಬಿ.ಎನ್.ಎಸ್. ಕಲಂ, 352,115,351,5 ರಂತೆ ಪ್ರಕರಣ
ದಾಖಲಾಗಿದೆ.