UPI New Rules-ನಾಳೆಯಿಂದ (ಆಗಸ್ಟ್‌ 1) ಯುಪಿಐ ನಿಯಮಗಳಲ್ಲಿ ಮಹತ್ವದ ಬದಲಾವಣೆ

UPI New Rules-ನಾಳೆಯಿಂದ (ಆಗಸ್ಟ್‌ 1) ಯುಪಿಐ ನಿಯಮಗಳಲ್ಲಿ ಮಹತ್ವದ ಬದಲಾವಣೆ

Kadaba Times News

ಹೊಸದಿಲ್ಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಆಗಸ್ಟ್ ಒಂದರಿಂದ ಜಾರಿಯಾಗುವಂತೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ)ನಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಬದಲಾವಣೆಗಳಲ್ಲಿ ಪ್ರಮುಖವಾಗಿ ಬ್ಯಾಲೆನ್ಸ್ ಪರಿಶೀಲನೆ ಮತ್ತು ವಹಿವಾಟಿನ ಸ್ಥಿತಿಗತಿ ಸೇರಿದೆ.  ಇಂಟರ್ಫೇಸನ್ನು ಸ್ಥಿರ ಮತ್ತು ಹೆಚ್ಚು ದಕ್ಷವಾಗಿ ಮಾಡುವ ಉದ್ದೇಶದಿಂದ ಬದಲಾವಣೆ ತರಲಾಗಿದೆ.



ಯುಪಿಐ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಸ್ಪಂದನೆ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗು 2025ರ ಏಪ್ರಿಲ್ 26ರಂದು ಹೊರಡಿಸಿದ ಸುತ್ತೋಲೆಯಲ್ಲಿ ಎನ್‌ಸಿಪಿಐ ಹೇಳಿತ್ತು. ಈ ಹೊಂದಾಣಿಕೆಯು ಪಾವತಿಸುವ ಬ್ಯಾಂಕ್ ಗಳಿಗೆ, ಫಲಾನುಭವಿ ಬ್ಯಾಂಕ್ ಗಳಿಗೆ ಮತ್ತು ಪಾವತಿ ಸೇವೆ ಒದಗಿಸುವ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂಗಳಿಗೆ ಲಾಭವಾಗಲಿದೆ ಎಂದು ಹೇಳಿತ್ತು.

 ನಾಳೆಯಿಂದ ಜಾರಿಯಾಗುವ ಪ್ರಮುಖ ಬದಲಾವಣೆಗಳು   ಬ್ಯಾಲೆನ್ಸ್ ತಪಾಸಣೆಗೆ ದೈನಿಕ ಮಿತಿ: ಯುಪಿಐ ಆ್ಯಪ್ ನಲ್ಲಿ ಬಳಕೆದಾರ ದಿನಕ್ಕೆ ಕೇವಲ 50 ಬಾರಿ ಮಾತ್ರ ತನ್ನ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗಲಿದೆ. ಮಿತಿಯು ಪ್ರತಿ ಆ್ಯಪ್ ಗೆ ಪ್ರತ್ಯೇಕವಾಗಿ ಅನ್ವಯವಾಗುತ್ತದೆ. ವಹಿವಾಟು ಸ್ಥಿತಿ ತಪಾಸಣೆಯ ಮಿತಿಯನ್ನೂ ನಿಗದಿಪಡಿಸಲಾಗಿದ್ದು, ಪ್ರತಿ ಪರಿಶೀಲನೆಯ ನಡುವೆ 90 ಸೆಕೆಂಡ್ ಅಂತರದಲ್ಲಿ 3 ಬಾರಿ ಮಾತ್ರ ಪರಿಶೀಲನೆ ಮಾಡಬಹುದಾಗಿದೆ

ಅಂತೆಯೇ ಬೆಳಿಗ್ಗೆ 10ಕ್ಕೆ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಹಾಗೂ ರಾತ್ರಿ 9.30 ಬಳಿಕ ಸ್ವಯಂಚಾಲಿತ ವಹಿವಾಟುಬ್ಯಾಂಕ್ ಗಳಿಗೆ ವ್ಯವಸ್ಥೆ ಇರುತ್ತದೆ.

  • ದಿನಕ್ಕೆ 25 ಬಾರಿ ಮಾತ್ರ ಸಂಪರ್ಕಿತ ಬ್ಯಾಂಕ್ ಖಾತೆಗಳನ್ನು ನೋಡಬಹುದಾಗಿದೆ.
  • ಪಾವತಿ ವಾಪಸ್ಸಾತಿ ಮಿತಿ: 30 ದಿನಗಳಲ್ಲಿ ಪಾವತಿ ವಾಪಸ್ಸಾತಿ ಮಿತಿಯನ್ನು 10ಕ್ಕೆ ಇಳಿಸಲಾಗಿದೆ.
  • ಪಾವತಿ ದೃಢಪಡಿಸುವ ಮುನ್ನ ಸ್ವೀಕರಿಸುವ ವ್ಯಕ್ತಿಯ ಬ್ಯಾಂಕ್ ನಲ್ಲಿ ನೋಂದಾಯಿಸಲ್ಪಟ್ಟ ಹೆಸರು ಪ್ರದರ್ಶನಗೊಳ್ಳಲಿದೆ.
  • ಯುಪಿಐ ಬಳಕೆಯ ಮೇಲೆ ಎನ್ಸಿಪಿಐ ನಿಗಾ ಇಡಲಿದೆ. ಅನುಸರಣೆ ಮಾಡದ ಬ್ಯಾಂಕ್ ಹಾಗೂ ಆ್ಯಪ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ  ಮತ್ತು ಲಭ್ಯತೆಯನ್ನು ನಿರ್ಬಂಧಿಸಲಾಗುತ್ತದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top