




ಕುಕ್ಕೆ ಸುಬ್ರಹ್ಮಣ್ಯ: ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಯ ಹೆಸರಾಂತ ಕಾಲೇಜೊಂದರ ವಿದ್ಯಾರ್ಥಿಗಳು ಕಾಲೇಜು ಜೀವನದ ತುಂಟಾ ಟ,ಸಹಪಾಠಿಗಳೊಂದಿಗಿನ ನೆನಪುಗಳನ್ನು ಸೆರೆಹಿಡಿಯುವ ಭರದಲ್ಲಿ ವಿಡಿಯೋ ಚಿತ್ರೀಕರಿಸಿ ಯೂನಿಫಾರಂ ಹರಿಯುವುದು ಸೇರಿದಂತೆ ಮಳೆ ನೀರಿನಲ್ಲಿ ಹುಚ್ಚಾಟ ಮಾಡುವ ರೀಲ್ಸ್ ಮಾಡಿದ್ದರು . ಟ್ರೆಂಡಿಂಗ್ ನಲ್ಲಿರುವ ರೀಲ್ಸ್ ಮೂಲಕ ಪೋಸ್ಟ್ ಮಾಡಿದ ವೀಡಿಯೋ ಭಾರೀ ವೈರಲ್ ಗೊಂಡಿತ್ತು.
ಕಾಲೇಜು
ಆವರಣದಲ್ಲಿಯೇ ಮಾಡಲಾದ ಈ ವೀಡಿಯೋ ನೋಡಿ ಸಾರ್ವಜನಿಕರು
ವಿಭಿನ್ನ ಕಮೆಂಟ್ ಹಾಕಿ ವಿದ್ಯಾರ್ಥಿಗಳ ಈ ನಡೆಯನ್ನು ಖಂಡಿಸಿದ್ದರು. ರೀಲ್ಸ್ ವೈರಲ್ ಗೊಂಡು ಟೀಕೆಗೆ ಗುರಿಯಾದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ ಚರ್ಚಿಸಿದ್ದಾರೆ. ಅಲ್ಲದೆ ಅಂತಿಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾಲೇಜು
ಮುಂಭಾಗದ ನಿಂತು ಕ್ಷಮೆಯಾಚಿಸಿದ್ದಾರೆ.ಈ ಮೂಲಕ ಸಾರ್ವಜನಿಕ ಚರ್ಚೆಗೆ ತೆರೆಬಿದ್ದಂತಾಗಿದೆ.
ಬಹಳ ಸುಂದರವಾದ ಚಿತ್ರೀಕರಣ ಹಾಗೂ ಎಡಿಟಿಂಗ್ ಮಾಡಿದರೂ ಈ ವಿಡಿಯೋದಲ್ಲಿ ಕಾಲೇಜು ಗೇಟಿನ ಹೊರಭಾಗದಲ್ಲಿ ನಮಿಸುವುದರಿಂದ ತೊಡಗಿ ಮಳೆಯಲ್ಲಿ ಆಟಗಳು, ಕಾಲೇಜು ಯೂನಿಫಾರಂ ಹರಿದು ನರ್ತಿಸುವ ದೃಶ್ಯಗಳೂ ಇದೆ. ಈ ಎಲ್ಲಾ ಹುಚ್ಚಾಟಗಳು ಕಾಲೇಜು ಆವರಣದಲ್ಲಿಯೇ ನಡೆದಿತ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಹಾಗೂ ತೀವ್ರ ವಿರೋಧಕ್ಕೂ ಕಾರಣವಾಗಿತ್ತು. ಕೆಲ ವಿದ್ಯಾರ್ಥಿಗಳು ತಮ್ಮ ಕೊನೆಯ ದಿನದ ಸಂಭ್ರಮದಲ್ಲಿ ಸ್ವಲ್ಪ ಮಿತಿಯೇ ಮರೆತುಹೋಗಿದ ತಾವು ತೊಟ್ಟಿದ್ದ ಕಾಲೇಜಿನ ಸಮವಸ್ತ್ರವನ್ನು ಹರಿದು, ಒಬ್ಬರೊಬ್ಬರ ಬಟ್ಟೆ ಚೀಲಾಡಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ವಿಡಿಯೋಗಳು ಸಾಕಷ್ಟು ಚರ್ಚೆಗೆ ಗ್ರಾಸವಾದವು.
ಕೆಲವು ಸಮಯದ
ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಇದೇ ಕಾಲೇಜು ವಿದ್ಯಾರ್ಥಿಗಳು ಬಿಸಲೆ ಪ್ರದೇಶದಲ್ಲಿ ನಡೆಸಿರುವ ಘಟನೆಗಳೂ
ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.
ಗ್ರಾಮೀಣ
ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಉತ್ತಮವಾದ ಶಿಕ್ಷಣ ಸಂಸ್ಥೆ, ಪದವಿ ಯಂತಹ ಶಿಕ್ಷಣಕ್ಕೆ
ಧಾರ್ಮಿಕ ಸಂಸ್ಥೆ ಆದ್ಯತೆ ಇರುವುದು ಗಮನಿಸಬೇಕಾದ ಅಂಶ.
ಆದರೆ ಅಂತಹ ಉದ್ದೇಶವನ್ನು ವಿದ್ಯಾರ್ಥಿಗಳು
ದುರುಪಯೋಗಪಡಿಸಿಕೊಳ್ಳುವುದು ಶಿಕ್ಷಣ ಸಂಸ್ಥೆಗೂ ಕಳಂಕದ ಕೆಲಸ. ಹೀಗಾಗಿ ಮುಂದೆ ಇಂತಹ ಘಟನೆಗಳು ನಡೆಯದಂತೆ
ಕ್ರಮದ ಅಗತ್ಯವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ
ಚರ್ಚೆಗಳು ನಡೆದಿವೆ.