ಎಡಮಂಗಲ: ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಜೀವಬೆದರಿಕೆ ಆರೋಪ:ದೂರು ದಾಖಲು

ಎಡಮಂಗಲ: ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಜೀವಬೆದರಿಕೆ ಆರೋಪ:ದೂರು ದಾಖಲು

Kadaba Times News

ಕಡಬ ಟೈಮ್ಸ್ (KADABA TIMES) :  ಗ್ರಾಮ ಪಂಚಾಯತ್‌ನ ಕೆಲವು ಅಸಮರ್ಪಕ ಕಾಮಗಾರಿಗಳ ಕುರಿತು ಧ್ವನಿ ಎತ್ತುತ್ತಿದ್ದ ಎಡಮಂಗಲದ ಮಾಹಿತಿ ಹಕ್ಕು ಕಾರ್ಯಕರ್ತರೋರ್ವರಿಗೆ (RTI Activist)  ಗ್ರಾಮ ಪಂಚಾಯತ್ ಅಧ್ಯಕ್ಷರು ಜೀವ ಬೆದರಿಕೆಯೊಡ್ಡಿದರೆಂದು ಆರೋಪಿಸಲಾಗಿದೆ.



ಈ ಕುರಿತು ವಿನಯಚಂದ್ರ ಅವರು ಜುಲೈ 31ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ  ಮಾಹಿತಿ ಲಭಿಸಿದೆ. ದೂರಿನ ಪ್ರಕಾರ,  ರೈಲ್ವೆ ಇಲಾಖೆಯ ಅಧಿಕಾರಿಗಳು ಎಡಮಂಗಲಕ್ಕೆ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಭೇಟಿ ಸಂದರ್ಭದಲ್ಲಿ ಪಂಚಾಯತ್‌ನ ಕೆಲವು ಕಾಮಗಾರಿಗಳ ಪರಿಶೀಲನೆಗೆ ತೆರಳುತ್ತಿದ್ದ ಸಂದರ್ಭದಲ್ಲೇ, ದಾರಿ ಮಧ್ಯೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ವಿನಯಚಂದ್ರ ಅವರು ಮಾಹಿತಿ ಹಕ್ಕಿನಡಿ (RTI) ಹಲವು ದಾಖಲೆಗಳನ್ನು ಪಡೆದು, ಎಡಮಂಗಲ ಗ್ರಾಮ ಪಂಚಾಯತ್‌ನ ಕೆಲ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ  ಎಂಬ ಅನುಮಾನವನ್ನು ಪ್ರಸ್ತಾಪಿಸಿದ್ದರು.  ಈ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ಳಾರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top