ಕಡಬ ಪಟ್ಟಣ ಪಂಚಾಯಿತ್ ಚುನಾವಣೆ: ಮಂಗಳವಾರದದಲೇ ನೀತಿ ಸಂಹಿತೆ ಜಾರಿ

ಕಡಬ ಪಟ್ಟಣ ಪಂಚಾಯಿತ್ ಚುನಾವಣೆ: ಮಂಗಳವಾರದದಲೇ ನೀತಿ ಸಂಹಿತೆ ಜಾರಿ

Kadaba Times News

 ಕಡಬ  ಪಟ್ಟಣ ಪಂಚಾಯತ್  ಚುನಾವಣೆಗೆ ಅಸೂಚನೆ ಪ್ರಕಟವಾಗಿದ್ದು, ಜಿಲ್ಲಾಕಾರಿಗಳು ಚುನಾವಣಾಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಂಗಳವಾರದದಲೇ (ಜು. 29 ) ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.



ಚುನಾವಣ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಮಂಗಳವಾರ ಸಂಜೆ ಕಡಬ ತಾಲೂಕು ಆಡಳಿತ ಸೌಧದಲ್ಲಿ  ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಪ್ರಮುಖ ರಾಜಕೀಯ ಪಕ್ಷಗಳ ಸಭೆ ನಡೆಸಿದರು.  ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾಕಾರಿಗಳನ್ನು ನೇಮಿಸಲಾಗಿದ್ದು, ಕಡಬ ಪಟ್ಟಣ ಪಂಚಾಯಿತಿ  ಸಭಾಂಗಣದಲ್ಲಿ  ನಾಮಪತ್ರ ಸಲ್ಲಿಕೆ ಸೇರಿದಂತೆ  ಚುನಾವಣೆಗೆ ಸಂಬಂಸಿದ ಎಲ್ಲಾ ಚಟುವಟಿಕೆಗಳಿಗಾಗಿ ಚುನಾವಣ ಕಚೇರಿ ತೆರೆಯಲಾಗಿದೆ ಎಂದು ತಿಳಿಸಿದರು.


ಚುನಾವಣೆಯ ಪೂರ್ವಭಾವಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದ ಚುನಾವಣ ಉಪ ತಹಶೀಲ್ದಾರ್ ಶಾಯಿದುಲ್ಲಾ ಖಾನ್  ಜು. 29 ರಿಂದಲೇ   ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. ಪಟ್ಟಣ ಪಂಚಾಯಿತಿಯಲ್ಲಿ  ತೆರೆಯಲಾಗಿರುವ ಚುನಾವಣ ಕಚೇರಿಯಲ್ಲಿ  ಪೂರ್ವಾಹ್ನ  11 ಗಂಟೆಯಿಂದ ಅಪರಾಹ್ನ  3 ಗಂಟೆಯ ತನಕ ನಾಮಪತ್ರ ಸಲ್ಲಿಸಬಹುದು. ಆದರೆ 29 ರಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಆ.5 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಆ.6 ರಂದು ನಾಮಪತ್ರ ಪರಿಶೀಲನೆ, ಆ.8 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ., ಆ.17 ರಂದು ಚುನಾವಣೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ  ಆ.19 ರಂದು ನಡೆಯಲಿದೆ. ಆ.20 ರಂದು ಬೆಳಗ್ಗೆ 8ಗಂಟೆಯಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ  ಜು. 29 ರಿಂದ ಆ.20 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 13 ವಾರ್ಡ್ ಗಳಲ್ಲಿ 13  ಬೂತ್ ಮಾಡಲಾಗಿದೆ. ಸರಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಮತಗಟ್ಟೆಗಳಾಗಿ ಆಯ್ಕೆ ಮಾಡಲಾಗಿದೆ.  ವಿದ್ಯುನ್ಮಾನ ಮತಯಂತ್ರದ ಮೂಲಕ ಚುನಾವಣೆ ನಡೆಯಲಿದ್ದು, ಚುನಾವಣೆಯ ಬಳಿಕ ತಾಲೂಕು ಕಚೇರಿಯಲ್ಲಿನ ಭದ್ರತಾ ಕೊಠಡಿಯಲ್ಲಿ  ಮತಯಂತ್ರಗಳನ್ನು  ಇರಿಸಲಾಗುವುದು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ  ಬ್ಯಾನರ್, ಫ್ಲೆಕ್ಸ್, ಬಂಟಿಂಗ್  ಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಸಮರ್ಪಕವಾಗಿಲ್ಲ  ಎನ್ನುವ ದೂರುಗಳ ಕುರಿತು ಪ್ರತಿಕ್ರಿಯಿಸಿದ ಅವರು ಮತದಾರರ ಪಟ್ಟಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಬಳಿಕ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ಕರೆದು ಅವರ ಸಮ್ಮುಖದಲ್ಲಿ  ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಚರ್ಚೆ ನಡೆಸಿ ತಪ್ಪುಗಳನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.  ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಲೀಲಾವತಿ ಇ. ಉಪಸ್ಥಿತರಿದ್ದರು.

ಚುನಾವಣಾಕಾರಿಗಳ ನೇಮಕ:   ವಾರ್ಡ್ ನಂ. ೧ರಿಂದ ೭ ರವರೆಗೆ  (೧-ಕಳಾರ, ೨-ಕೋಡಿಬೈಲು, ೩-ಪನ್ಯ, ೪-ಬೆದ್ರಾಜೆ, ೫-ಮಾಲೇಶ್ವರ, ೬- ಕಡಬ, ೭-ಪಣೆಮಜಲು)  ಚುನಾವಣಾಕಾರಿಯಾಗಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಕಾರಿ ವಿಮಲ್  ಬಾಬು, ಸಹಾಯಕ ಚುನಾವಣಾಕಾರಿಯಾಗಿ ತಾ.ಪಂ. ವ್ಯವಸ್ಥಾಪಕ (ಪ್ರಭಾರ) ಭುವನೇಂದ್ರ ಕುಮಾರ್ ಎಂ.,  ವಾರ್ಡ್ ೮ರಿಂದ ೧೩ರವರೆಗೆ (೮-ಪಿಜಕಳ, ೯-ಮೂರಾಜೆ, ೧೦-ದೊಡ್ಡಕೊಪ್ಪ, ೧೧-ಕೋಡಿಂಬಾಳ, ೧೨-ಮಜ್ಜಾರು, ೧೩-ಪುಳಿಕುಕ್ಕು) ಚುನಾವಣಾಕಾರಿಯಾಗಿ    ಲೋಕೋಪಯೋಗಿ ಇಲಾಖೆಯ ಸುಬ್ರಹ್ಮಣ್ಯ ವಿಭಾಗದ  ಸಹಾಯಕ ಇಂಜಿನಿಯರ್  ಪ್ರಮೋದ್ ಕುಮಾರ್ ಕೆ.ಕೆ., ಸಹಾಯಕ ಚುನಾವಣಾಕಾರಿಯಾಗಿ ಕೊಯಿಲ  ಗ್ರಾ.ಪಂ. ಅಭಿವೃದ್ಧಿ ಅಕಾರಿ ಸಂದೇಶ್ ಕೆ.ಎನ್. ಅವರನ್ನು ನೇಮಕಗೊಳಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top