ಶಿಕ್ಷಕಿಯರಾಗಲು ನಿಮಗೊಂದು ಸುವರ್ಣಾವಕಾಶ: ಕಡಬದ ಜ್ಞಾನಸುಧಾ ವಿದ್ಯಾಲಯದಲ್ಲಿ ಮೊಂಟೆಸ್ಸರಿ ಶಿಕ್ಷಣ ಒಂದೇ ವರ್ಷದಲ್ಲಿ ಪಡೆಯಿರಿ

ಶಿಕ್ಷಕಿಯರಾಗಲು ನಿಮಗೊಂದು ಸುವರ್ಣಾವಕಾಶ: ಕಡಬದ ಜ್ಞಾನಸುಧಾ ವಿದ್ಯಾಲಯದಲ್ಲಿ ಮೊಂಟೆಸ್ಸರಿ ಶಿಕ್ಷಣ ಒಂದೇ ವರ್ಷದಲ್ಲಿ ಪಡೆಯಿರಿ

Kadaba Times News

ಕಡಬ ಟೈಮ್ಸ್ (KADABA TIMES):    ಕಡಬದ ಮುಖ್ಯರಸ್ತೆಯ  ಹೃದಯ ಭಾಗದಲ್ಲಿರುವ  ಮಹಾಗಣಪತಿ  ಬಿಲ್ಡಿಂಗ್ ನಲ್ಲಿ  ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ  ಜನರ ವಿಶ್ವಾಸಕ್ಕೆ ಪಾತ್ರವಾಗಿರುವ   ಜ್ಞಾನಸುಧಾ  ವಿದ್ಯಾಲಯದಲ್ಲಿ   ಮೊಂಟೆಸ್ಸರಿ ಶಿಕ್ಷಣ ಒದಗಿಸುತ್ತಿದೆ.  ಪ್ರತಿವರ್ಷವೂಈ ವಿದ್ಯಾ ಕೇಂದ್ರದಲ್ಲಿ  ತರಬೇತಿ ಪಡೆಯುವ ಅಭ್ಯರ್ಥಿಗಳು   ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ  ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ  ಶಿಕ್ಷಕಿಯರಾಗಿ  ಉದ್ಯೋಗ  ಮಾಡುತ್ತಿದ್ದಾರೆ.  ಈ ಸಂಸ್ಥೆಯಲ್ಲಿ  ಮೊಂಟೆಸ್ಸರಿ ಶಿಕ್ಷಣದ ತರಬೇತಿ ಪಡೆದು ಪರೀಕ್ಷೆ  ಬರೆದ  ಎಲ್ಲಾ ಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಗೊಂಡು ಸಂಸ್ಥೆಗೆ 100% ಫಲಿತಾಂಶ ನೀಡುವ ಮೂಲಕ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ  ಸಾಕ್ಷಿಯಾಗಿದ್ದಾರೆ. 



ಕೇಂದ್ರ ಸರಕಾರದ ನಿರುದ್ಯೋಗ ನಿರ್ಮೂಲನ ಎಜೆನ್ಸಿಯಾಗಿರುವ  ಭಾರತ್ ಸೇವಾ ಸಮಾಜದ ವತಿಯಿಂದ ಈ ತರಬೇತಿಯನ್ನು ನಡೆಸಲಾಗುತ್ತಿದ್ದು.  ಸಂಸ್ಥೆಯ ಮೂಲಕ ತರಬೇತಿ ಪಡೆದ ತರಬೇತಿ ಪಡೆದವರು   ಒಂದು ವರ್ಷದಲ್ಲಿ ಮಗುವಿಗೆ ಬೇಕಾದ ಎಲ್ಲಾ ಅಂಶಗಳನ್ನು  ಪೂರ್ವ ಪ್ರಾಥಮಿಕ ಹಂತದಲ್ಲಿ ಬೆಳಸಲು ಸಹಕರಿಯಾಗಬಲ್ಲ  ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದನ್ನು ಕಲಿಸಿಕೊಡುವ ಮೂಲಕ ಉತ್ತಮ ಶಿಕ್ಷಕಿಯರನ್ನು ಸಂಸ್ಥೆ ರೂಪಿಸುತ್ತಿದೆ.


ಹಾಗೆಯೇ ಈ ವಿದ್ಯಾಲಯದಲ್ಲಿ LKG ಯಿಂದ SSLC ವರೆಗೆ  ಎಲ್ಲಾ ವಿಷಯಗಳಿಗೆ ಪ್ರತ್ಯೇಕವಾಗಿ ಸ್ನಾತ್ತಕೋತ್ತರ ಪದವಿ ಪಡೆದ ಅನುಭವಿ ಶಿಕ್ಷಕರಿಂದ ಕೋಚಿಂಗ್ (ಟ್ಯೂಷನ್) ನೀಡಲಾಗುವುದು. ಜೊತೆಗೆ 8,9 ನೇ ತರಗತಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ  ಖಾಸಗಿ ಅಭ್ಯರ್ಥಿಗಳಾಗಿ 10ನೇ ತರಗತಿ ಪರೀಕ್ಷೆ ,ಪ್ರಥಮ ಪಿಯುಸಿ ಅನುತ್ತೀರ್ಣರಾದವರು ಧ್ವಿತೀಯ ಪಿಯುಸಿ ಗೆ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಈಗಾಗಲೇ ಎಸ್. ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿರುತ್ತದೆ.


ಮಕ್ಕಳ ಕಲಿಕೆಗೆ ಹೊಸ ದಾರಿ, ಮಾಂಟೆಸ್ಸರಿ ಶಿಕ್ಷಣವಾಗಿದ್ದು   ಇಂತಹ  ಮಾಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ ಜ್ಞಾನಸುಧಾ  ವಿದ್ಯಾಲಯ.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಂಚಾಲಕರಾದ ಬಿ. ಎಲ್ ಜನಾರ್ಧನ ಅವರನ್ನು   +91 94812 29381 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top