




ಕಡಬ ಟೈಮ್( KADABA TIMES): ಇತ್ತೀಚೆಗೆ ನಿಧನರಾರಾದ ನವೋದಯ ಕಾಲದ ಖ್ಯಾತ ಕವಿ, ಬರಹಗಾರರಾದ ಎಚ್ಎಸ್ ವೆಂಕಟೇಶ್ ಮೂರ್ತಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ರಾಮಕುಂಜದಲ್ಲಿ ನಡೆದ ಕಸಾಪ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಶ್ರೀ
ಕೆಎಸ್ಎಸ್ ರೈ ಅವರು ನುಡಿ ನಮನ ಸಲ್ಲಿಸಿ ಎಚ್ಎಸ್ ವೆಂಕಟೇಶ್ ಮೂರ್ತಿಯವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು
ಹಳೆಯ ಸಂಪ್ರದಾಯದಲ್ಲಿ ಕೃಷಿ ಮಾಡಿ ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯಪ್ರಿಯರಿಗೆ ಕೊಟ್ಟ ಮಹಾನ್
ಲೇಖಕರು ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು
ಕಳಚಿದಂತಾಗಿದೆ ಎಂದು ಸಂತಾಪ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕಾಸಾಪ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ
ಜನಾರ್ದನ ಗೌಡ ಪಣೆಮಜಲು, ಹೋಬಳಿ ಅಧ್ಯಕ್ಷ ಶ್ರೀ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿಗಳಾದ ಶ್ರೀ ಎನ್
ಕೆ. ನಾಗರಾಜ್,ಶ್ರೀ ವಸಂತ್ ಕುಮಾರ್ ಡಿ, ಕೋಶಾಧಿಕಾರಿ ಶ್ರೀ ಬಾಲಚಂದ್ರ ಮುಚ್ಚಿಂತಾಯ, ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ಬಿ,ಸದಸ್ಯರಾದ ಶ್ರೀ
ವೆಂಕಟರಮಣ ಭಟ್,ಶ್ರೀ ಯಶವಂತ ರೈ, ಶ್ರೀ ಎ.ಎನ್ ಕೊಳಂಬೆ, ಶ್ರೀ ರಮೇಶ್ ಕೋಟೆ, ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಪೋಷಕರು ಹಾಗೂ ಊರ ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು.