




ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಜಿ.ಪಿ.ಎ. ಹೋಲ್ಡರ್ (ರ್ಜನರಲ್ ಪವರ್ ಆಫ್ ಅಟಾರ್ನಿ) ಎಸ್. ಆರ್ ಪ್ರಸನ್ನ (63 ವ) ಅವರು ರೈಲಿನಲ್ಲಿ ಸಂಚರಿಸುವ ವೇಳೆ ರೈಲಿನಿಂದ ಹೊರಗೆ ಬಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೈಸೂರು ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿ
ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮಠದ ಕೆಲಸ ಮುಗಿಸಿ ಬುಧವಾರ ರಾತ್ರಿ
ನೆಟ್ಟಣದ ರೈಲು ನಿಲ್ದಾಣದಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಲುವಾಗಿ ರೈಲು ಏರಿದ್ದರು.
ಬೆಳಿಗ್ಗೆಯಾದರೂ ಮನೆಗೆ ತಲುಪದ ಹಿನ್ನೆಲೆ ಕುಟುಂಬಸ್ಥರು
ಮತ್ತು ಮಠದ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು. ಅವರ ಪೋನ್ ಸಂಖ್ಯೆಗೆ ಸಂಪರ್ಕ ಮಾಡಿದಾಗ
ಪೋನ್ ರಿಂಗ್ ಆಗುತ್ತಿದ್ದರೂ ಸ್ವೀಕರಿಸುತ್ತಿರಲಿಲ್ಲ.
ಕೆಲ ಹೊತ್ತಿನ
ಬಳಿಕ ಯಾರೋ ಬೇರೆಯವರು ಪೋನ್ ಸ್ವೀಕರಿಸಿ ಘಟನೆ ಬಗ್ಗೆ
ವಿವರಿಸಿದ್ದಾರೆ ಎನ್ನಲಾಗಿದೆ . ಮಾಹಿತಿ ಇಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಮಠದ ಪ್ರಮುಖರು ಮೈಸೂರಿಗೆ ತೆರಳಿರುವುದಾಗಿ
ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.