




ಕಡಬ ಟೈಮ್ಸ್, ಪ್ರಮುಖ ಸುದ್ದಿ : ವರ್ಷದ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೊಬ್ಬರು ಡಿಢೀರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಜೂ.18ರ ಸಂಜೆ ನಡೆದಿದೆ.
ಮೂಲತ: ಕೊಂಬಾರು ಗ್ರಾಮದಲ್ಲಿ ವಾಸವಿದ್ದ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಹೃದಯಾಘಾತಕ್ಕೆ ಒಳಗಾದವರು
![]() |
ನಿವೃತ್ತ ಸೈನಿಕ ಪ್ರಭಾಕರನ್( Kadaba times) |
ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಅಡ್ಡಗದ್ದೆ ಬಳಿ ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು .ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಗಳಿಗೆ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದರು..ಪ್ರಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬ ಕಳಾರ ಬಳಿ ಖರೀದಿಸಿದ್ದ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಎರಡು ವಾರದ ಹಿಂದೆಯಷ್ಟೇ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ್ದರು.
ಇಂದು ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.ಕೂಡಲೇ ಕಡಬ ಸಮುದಾಯ ಆಸ್ಪಗೆ ಆಗಮಿಸಿದ್ದು ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆ ಗೆ ಮುಂದಾಗಿದ್ದರು .ಹೆಚ್ಚಿನ ಚಿಕಿತ್ಸೆ ಗಾಗಿ ಪುತ್ತೂರಿಗೆ ಕರೆದೊಯ್ದರು ಪ್ರಾಣ ಉಳಿಯಲಿಲ್ಲ.
ಇ
ವರ ನಿಧನ ಸುದ್ದಿ ಕೇಳಿ ಹಲವರು ಹಿತೈಷಿಗಳು ಮನೆಯತ್ತ ಧಾವಿಸಿದ್ದಾರೆ. ಮೃತರು ಪತ್ನಿ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ.