




ಕಡಬ ಟೈಮ್ಸ್, ಮನೋರಂಜನೆ: ಶ್ರೀ ಶಂಕ ಚಕ್ರ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ರೀ ಕ್ಷೇತ್ರ ಪೊಳಲಿಯ ಭಕ್ತಿಪೂರ್ಣ ಹಾಡು "ಪೊಳಲಿದ ಮಹಾಮಾಯೇ" ಭಕ್ತರಿಗಾಗಿ ಬಿಡುಗಡೆಗೊಂಡಿದೆ.
ಈ ಭಾವಪೂರ್ಣ ಭಕ್ತಿ ಗೀತೆಯು ಗುರು ಬಾಯಾರು ಅವರ ಸುಮಧುರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಸುಧಾಕರ ಮತ್ತು ಮನೋಜ್ ಬೈದ ಅವರು ತಮ್ಮ ಶ್ರವ್ಯ ಧ್ವನಿಯಲ್ಲಿ ಹಾಡಿದ್ದಾರೆ.
ಈ ಗೀತೆಯ ಸಾಹಿತ್ಯ ಮತ್ತು ಸಂಯೋಜನೆ ಕಾರ್ಯವನ್ನು ಮನೋಜ್
ಬೈದ ಅವರು ನಿಭಾಯಿಸಿದ್ದು, ಅದರ ಮೂಲಕ ದೇವಿ ಮಹಾಮಾಯೆಯ ಮಹಿಮೆಯನ್ನು ತುಂಬಾ ಮನಮೋಹಕವಾಗಿ ಪ್ರಸ್ತುತಪಡಿಸಿದ್ದಾರೆ.
ಈ ಹಾಡು ನಿಶ್ಚಿತವಾಗಿ ಆಧ್ಯಾತ್ಮಿಕ ಅನುಭವವನ್ನು ಒದಗಿಸುವಂತದ್ದು. ಈ ಹಾಡನ್ನು ಆಲಿಸಿ, ಶ್ರೀ ಶಂಕ
ಚಕ್ರ ಯೂಟ್ಯೂಬ್ ಚಾನೆಲ್ Subscribe ಮಾಡಿ.