ಕಡಬ: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶೋತ್ಸವ

ಕಡಬ: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶೋತ್ಸವ

Kadaba Times News

 ಕಡಬ ಟೈಮ್ಸ್ ,ಪ್ರಮುಖ ಸುದ್ದಿ,: ಪಟ್ಟಣ ಸುದ್ದಿ :  ಇಲ್ಲಿನ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ  2025-26ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು  ಜೂನ್. ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.

ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡುತ್ತಿರುವುದು(KADABA TIMES)


ಮಕ್ಕಳನ್ನು  ಮಾತಾಜಿಯವರು ಆರತಿ ಬೆಳಗಿ ಸ್ವಾಗತಿಸುವುದರ ಜೊತೆಗೆ    ಭಾರತಮಾತೆಗೆ ಪುಷ್ಪರ್ಚನೆ ಮತ್ತು  ಹಿರಿಯರಿಂದ ತಿಲಕಧಾರಣೆ, ಸಿಹಿ ನೀಡುವುದರ ಮೂಲಕ  ಪ್ರೀತಿಪೂರ್ವಕವಾಗಿ ಬರ ಮಾಡಿಕೊಳ್ಳಲಾಯಿತು.


ಮುಖ್ಯ ಅತಿಥಿಯಾಗಿ  ಆಗಮಿಸಿದ ಕುಂತೂರು ಮಂಜುನಾಥ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಕುಮಾರ ಸುಬ್ರಹ್ಮಣ್ಯ ರವರು ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸನಾತನ ಸಂಸ್ಕೃತಿಯ ಅರಿವು ಅಗತ್ಯ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸುದ್ದಿಯನ್ನು ಆಂಗ್ಲ ಭಾಷೆಯಲ್ಲಿ ಓದಿರಿ: Kadaba : Saraswathi English Medium SchoolHosts Grand Admission Ceremony for 2025–26 Academic Year

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಡಾ.‌ ಪ್ರಭಾಕರ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಹಿಂದೂ ಧರ್ಮ, ಸಂಸ್ಕೃತಿಯನ್ನು ಉಳಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದ ಸಾಧ್ಯ. ಅಂತಹ ಕಾರ್ಯವನ್ನು  ಸರಸ್ವತಿ ಶಾಲೆ ಮಾಡುತ್ತಿದೆ. ಪೋಷಕರು, ಗ್ರಾಮಸ್ಥರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.


ವೇದಿಕೆಯಲ್ಲಿ   ವಿದ್ಯಾವರ್ಧಕ ಸಂಘದ ಸಹ ಕಾರ್ಯನಿರ್ವಹಣಾಧಿಕಾರಿ  ವೆಂಕಟ್ರಮಣ ರಾವ್ ಮಂಕುಡೆ, ಸಂಘದ ನಿರ್ದೇಶಕ  ಕೃಷ್ಣ ಶೆಟ್ಟಿ ಕಡಬ, ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಆಡಳಿತ ಮಂಡಳಿ ಅಧ್ಯಕ್ಷ ಸದಾಶಿವ ಭಟ್, ಸಂಚಾಲಕ ಅಜಿತ್ ರೈ ಆರ್ತಿಲ, ಸಂಸ್ಥೆಯ ಮುಖ್ಯಗುರುಗಳಾದ ವಸಂತ ಕೆ. ಉಪಸ್ಥಿತರಿದ್ದರು.  ಶಿಕ್ಷಕಿ ಕುಮಾರಿ ಮಮತಾ ಪಿ. ,ಕುಮಾರಿ ಶ್ವೇತಾ ಪಿ.ಕೆ ,ಶ್ರೀಮತಿ ಶಾಂತಿನಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top