ಮರ್ದಾಳ : ಬಿಳಿನೆಲೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

ಮರ್ದಾಳ : ಬಿಳಿನೆಲೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

Kadaba Times News
0

 ಕಡಬ ಟೈಮ್ಸ್ ,ಪ್ರಮುಖ ಸುದ್ದಿ,: ಪಟ್ಟಣ ಸುದ್ದಿ :   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ  ಬಿಳಿನೆಲೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಜೂನ್ ತಿಂಗಳ ಮಾಸಿಕ ಸಭೆಯು ಮರ್ದಾಳ ವಲಯ ಕಛೇರಿಯಲ್ಲಿ ನಡೆಯಿತು.



ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಭೆಯಲ್ಲಿ ಮಾತನಾಡಿ,  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮೂಲಕ ಪ್ರತೀ ವಲಯದಲ್ಲಿ ಒಂದು ವಿಪತ್ತು ನಿರ್ವಹಣಾ ಘಟಕವನ್ನು ಸೂಕ್ತ ತರಬೇತಿಯೊಂದಿಗೆ  ನಿಯೋಜಿಸಲಾಗಿದೆ.  ಪ್ರಾಕೃತಿಕ ವಿಕೋಪದಿಂದ ಅನಾಹುತಗಳು ಸಂಭವಿಸಿದಾಗ, ರಸ್ತೆ ಅಪಘಾತಗಳು ಸಂಭವಿಸಿದಾಗ ಹಾಗೂ ಅನಾರೋಗ್ಶದಿಂದ ಬಳಲುತ್ತಿರುವ ವ್ಶಕ್ತಿಯ ಆತ್ಮಸ್ಥೈರ್ಯ ಹೆಚ್ಚಿಸಲು ಸ್ಥಳೀಯವಾಗಿಯೇ ಸೂಕ್ತ ವ್ಶಕ್ತಿಗಳ ನೆರವು ದೊರೆತರೆ ಸಮಾಜದಲ್ಲಿ ಉತ್ತಮ ವಾತಾವರಣವನ್ನು ಮೂಡಿಸಲು ಸಾಧ್ಶವಾಗುತ್ತದೆ.

ಮಳೆಗಾಲ ಪ್ರಾರಂಭವಾಗುವ ಈ ಸಂದರ್ಭದಲ್ಲಿ ನೀರಿನ ಪ್ರವಾಹ ˌ ವಿಪರೀತ ಗಾಳಿ ಮಳೆಯಿಂದ ಮನೆಗಳಿಗೆ ಮರಗಳಿಂದ ಆಗುವ ಅನಾಹುತ, ರಸ್ತೆಗಳಿಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗುವ ಸಂದರ್ಭ ನಮ್ಮ ಶೌರ್ಯ ವಿಪತ್ತು ಘಟಕದ ಎಲ್ಲಾ ಸ್ವಯಂ ಸೇವಕರುಗಳು ಸೇವಾ ಮನೊಭಾವನೆಯಿಂದ ನೆರವು ನೀಡಲು ಸಿದ್ದರಿರಬೇಕು. ತಮ್ಮ ಸಾಮಾಜಿಕ ಕಳಕಳಿಯ ಕೆಲಸವು ಸಮಾಜಕ್ಕೆ ಸ್ಪೂರ್ತಿಯಾಗಬೇಕು ಎಂದು ರವಿ ಪ್ರಸಾದ್ ಆಲಾಜೆ ಹೇಳಿದರು.



ಘಟಕ ಪ್ರತಿನಿಧಿ ಭವಾನಿಶಂಕರ ಸಭೆಯ ಅಧ್ಶಕ್ಷತೆ ವಹಿಸಿದ್ದರು.  ಘಟಕ ಸಂಯೋಜಕಿ ಜ್ಞಾನ ಸೆಲ್ವೀ ಹಾಗೂ ಘಟಕದ ಸ್ವಯಂ ಸೇವಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಪಿಜಕಳದಲ್ಲಿ ಶ್ರಮದಾನ : ಕಡಬ ತಾಲೂಕು ಕಡಬ ವಲಯದ ಶೌರ್ಯ ಘಟಕದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿಜಕಳದಲ್ಲಿ ಶ್ರಮದಾನ ನಡೆಯಿತು. ಈ ವೇಳೆ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ‌ನಿರ್ದೇಶಕ  ಬಾಬು ನಾಯ್ಕ್, , ತಾಲೂಕಿನ ಯೋಜನಾಧಿಕಾರಿ  ಪ್ರಕಾಶ್ ಕುಮಾರ್  ಜೊತೆಗಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top