ನಮ್ಮ ಕಡಬಕ್ಕೆ ಹೆಮ್ಮೆ:ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಎಸ್.ಐ ಆಗಿ ಪದೋನ್ನತಿ

ನಮ್ಮ ಕಡಬಕ್ಕೆ ಹೆಮ್ಮೆ:ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಎಸ್.ಐ ಆಗಿ ಪದೋನ್ನತಿ

Kadaba Times News

ಕಡಬ ಟೈಮ್ಸ್( KADABA TIME S) : ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ  ಸುದೀರ್ಘ 22 ವರ್ಷ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಕಡಬ ಮೂಲದ  ಬೆಳಿಯಪ್ಪಗೌಡ ಅವರು ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ್ದಾರೆ.

ಬೆಳಿಯಪ್ಪಗೌಡ( Kadaba times)


ಕರ್ತವ್ಯಕ್ಕೆ ಸೇರಿದ ಬಳಿಕ   ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಮತ್ತು ಸಹಾಯಕ ಉಪ ನಿರೀಕ್ಷಕರಾಗಿ ಮುಂಭಡ್ತಿಗೊಂಡಿದ್ದರು. ಪ್ರಸ್ತುತ ಇವರು 133ನೇ ಬೆಟಾಲಿಯನ್ ರಾಂಚಿ ಜಾರ್ಖಂಡ್‌ನಲ್ಲಿ ಸೇವೆಯಲ್ಲಿಸುತ್ತಿದ್ದಾರೆ



ಮೂಲತ: ಕಡಬ ತಾಲೂಕು  ಐತ್ತೂರು  ಗ್ರಾಮದ ಮುಂಡಡ್ಕ ಶ್ರೀಮತಿ ಕೃಷ್ಣಮ್ಮ ಮತ್ತು ಬಿರ್ಮಣ್ಣ ಗೌಡ ಇವರ ಪುತ್ರರಾಗಿರುವ ಇವರು ಪತ್ನಿ ಶ್ರೀಮತಿ ವನಿತಾ   ಹಾಗೂ ಜಗನ್ ಮತ್ತು ತನ್ವಿನ್ ಎಂಬ ಇಬ್ಬರು ಪುತ್ರರನ್ನು ಹೊಂದಿದ್ದಾರೆ.


. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಂಕದಕಟ್ಟೆ ಮತ್ತು ಬೈಲು ಬಿಳಿನೆಲೆ ಯಲ್ಲಿ ಹಾಗೂ ಹೈ ಸ್ಕೂಲ್ ವಿದ್ಯಾಭ್ಯಾಸ ವನ್ನು ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆಯಲ್ಲಿ ಮತ್ತು JOC ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯ ಪೂರೈಸಿದ್ದರು.ಸುಬ್ರಹ್ಮಣ್ಯ ದ   ಕೆ ಎಸ್ ಎಸ್ ಕಾಲೇಜಿನಲ್ಲಿ ಅಂತಿಮ ಪದವಿ ಪಡೆಯುವಾಗಲೇ 2003 ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ   ಸೇವೆಗೆ ಆಯ್ಕೆಯಾಗಿದ್ದರು.ಇವರ ಈ ಸೇವೆ, ಪರಿಶ್ರಮ ನಮ್ಮ ಕಡಬಕ್ಕೆ ಹೆಮ್ಮೆಯಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top