




KADABA TIMES(ಕಡಬ ಟೈಮ್ಸ್) : ಲೋಕೋಪಯೋಗಿ ಇಲಾಖೆ ವತಿಯಿಂದ ಹೆದ್ದಾರಿ ಬದಿ ಅಳವಡಿಸಿ ಬಳಿಕ ತೆರವು ಮಾಡಲಾಗಿದ್ದ ತಡೆಬೇಲಿಯನ್ನು ಕಳವುಗೈಯಲು ಯತ್ನಿಸಿದ ಘಟನೆ ಜೂ.3 ರಂದು ನಡೆದಿದೆ.
ಸುಬ್ರಹ್ಮಣ್ಯ
– ಕಡಬ ಹೆದ್ದಾರಿಯ ನೆಟ್ಟಣದ ಸೇತುವೆ ಬಳಿ ಹಳೆಯ ತಡೆಬೇಲಿಯನ್ನು ಟೆಂಡರ್ ಮಾಡಲು ಮನೆಯೊಂದರ ಸಮೀಪ ಇರಿಸಲಾಗಿತ್ತು. ಅದನ್ನು ಗುಜರಿಗೆ ಮಾರಾಟ ಮಾಡುವ ಉದ್ದೇಶದಿಂದ ವ್ಯಕ್ತಿಯೋರ್ವ ತನ್ನ ವಾಹನಕ್ಕೆ ತುಂಬುತ್ತಿರುವುದು ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ವಾಹಕ ಗಣೇಶ್ ಅವರ ಗಮನಕ್ಕೆ ಬಂದಿತು. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ
ಆಗಮಿಸಿದ ಪೊಲೀಸರು ಮಾಹಿತಿ ಪರಿಶೀಲಿಸಿ ವಾಹನ ಚಾಲಕ ಕೋಡಿಂಬಾಳದ
ನಿವಾಸಿ ಕಾಸಿಂ ಎಂಬಾತನನ್ನು
ವಶಕ್ಕೆ ಪಡೆದು ಬಂಧಿಸಿರುವುದಾಗಿ ತಿಳಿದು ಬಂದಿದೆ . ಕಳವಿಗೆ ಯತ್ನಿಸಿದ ಸೊತ್ತಿನ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.