ಕಡಬ:ಜಗಳವಾಡಿ ಎಲೆ ಅಡಿಕೆ ಹುಡಿಮಾಡುವ ಕಲ್ಲಿನಿಂದ ಹಲ್ಲೆ ನಡೆಸಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿ ಮಗನಿಗೆ ಜೈಲು ಶಿಕ್ಷೆ

Kadaba Times News

 ಕಡಬ ಟೈಮ್ಸ್ (KADABA TIMES):ಕಡಬ: ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿ ಮಗನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಕಡಬ ತಾಲೂಕಿನ  ಕಾಣಿಯೂರು ಸಮೀಪದ  ಕ್ಯಾಮಣ ಗ್ರಾಮ ನಿವಾಸಿ ಗೋಪಾಲ ಯಾನೆ ಗೋಪ ಜೈಲುಶಿಕ್ಷೆಗೆ ಒಳಗಾದ ಆರೋಪಿ.



ಈತ 2019  ಫೆ.15 ರಂದು ರಾತ್ರಿ ತನ್ನ ತಾಯಿ ಚೀಂಕುರು ಎಂಬವರೊಂದಿಗೆ ಜಗಳವಾಡಿ ಎಲೆ ಅಡಿಕೆ ಹುಡಿಮಾಡುವ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಬಳಿಕ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ 2019 ಫೆ.19 ರಂದು ಚೀಂಕುರು ಮೃತಪಟ್ಟಿದ್ದರು.


ಘಟನೆಗೆ ಸಂಬಂಧಿಸಿ ಆರೋಪಿತನ ವಿರುದ್ದ ಐಪಿಸಿ ಕಲಂ 304(2)ರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಈ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ,ಪ್ರತಿ ವಿವಾದವನ್ನು ಆಲಿಸಿ ವೈದ್ಯಕೀಯ ಸಾಕ್ಷ್ಯವನ್ನು ಪರಿಗಣಿಸಿ, ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮಂಗಳೂರು(ಪೀಠಾಸೀನ ಪುತ್ತೂರು)ನ್ಯಾಯಾಧಿಶರಾದ ಸರಿತಾ ಡಿ ಇವರು  ವಿಚಾರಣೆ ನಡೆಸಿ ಆರೋಪಿಗೆ 5 ವರ್ಷ ಜೈಲುಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಜೈಲುಶಿಕ್ಷೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದೆ.ಅಭಿಯೋಜನೆಯ ಪರವಾಗಿ ಶ್ರೀಮತಿ ಜಯಂತಿ ಕೆ.ಭಟ್‌ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top