ಕಡಬ:ಬಸ್ಸಲ್ಲಿ ಅನ್ಯಕೋಮಿನ ಯುವಕರ ಜೊತೆ ಯುವತಿ ಪ್ರಯಾಣ ಎಂಬ ಸುದ್ದಿ ಹಬ್ಬಿಸಿ ಬಸ್ ತಡೆದ ಗುಂಪು: ಅಸಲಿ ವಿಚಾರ ಬಹಿರಂಗಗೊಳಿಸಿದ ಪೊಲೀಸರು

ಕಡಬ:ಬಸ್ಸಲ್ಲಿ ಅನ್ಯಕೋಮಿನ ಯುವಕರ ಜೊತೆ ಯುವತಿ ಪ್ರಯಾಣ ಎಂಬ ಸುದ್ದಿ ಹಬ್ಬಿಸಿ ಬಸ್ ತಡೆದ ಗುಂಪು: ಅಸಲಿ ವಿಚಾರ ಬಹಿರಂಗಗೊಳಿಸಿದ ಪೊಲೀಸರು

Kadaba Times News

ಕಡಬ ಟೈಮ್ಸ್, (   KADABA TIMES): ಬಸ್ಸಿನಲ್ಲಿ  ಯುವತಿ ಜೊತೆ  ಭಿನ್ನ ಕೋಮಿನ  ಇಬ್ಬರು ಯುವಕರು ಒಂದೇ ಸೀಟಿನಲ್ಲಿ ಕುಳಿತು  ಪ್ರಯಾಣಿಸುತ್ತಿರುವುದಾಗಿ ಸುದ್ದಿ ಹಬ್ಬಿಸಿ  ಹಿಂದೂಪರ ಸಂಘಟನೆಯ ಕಾರ್ಯಕರ್ತರು ಎನ್ನಲಾದ ತಂಡ ಬಸ್ ತಡೆದಿದ್ದು ಇದರ  ಅಸಲಿ ವಿಚಾರವನ್ನು ಕಡಬ ಪೊಲೀಸರು ಬೇಧಿಸಿದ್ದಾರೆ.

ಠಾಣಾ ಬಳಿ ಬಸ್ ತಡೆದಿರುವುದು(    KADABA TIMES)

ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸನ್ನು ಕಡಬ ಪೊಲೀಸ್ ಠಾಣಾ ಸಮೀಪ ಬಜರಂಗದಳದ ಕಾರ್ಯಕರ್ತರು ಎನ್ನಲಾದ  ಗುಂಪೊಂದು ತಡೆದು ನಿಲ್ಲಿಸಿದ್ದರು. ಯುವಕರು ಮತ್ತು ಯುವತಿ ಬಸ್ಸಿನಲ್ಲಿ ಕುಳಿತ್ತಿದ್ದ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿತ್ತು. ಕೆಲಹೊತ್ತು ಆತಂಕದದ ವಾತಾವರಣ ಸೃಷ್ಟಿಯಾಗಿ ಅಧಿಕ ಮಂದಿ ಗುಂಪು ಸೇರಿದ್ದರು.


ಸ್ಥಳಕ್ಕೆ ಆಗಮಿಸಿದ ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ   ಯುವಕರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯೊಂದರಲ್ಲಿ ಜೊತೆಗೆಯಾಗಿ ಕೆಲಸ ಮಾಡುತ್ತಿರುವ ತಂಡವೆಂದು ಗೊತ್ತಾಗಿದೆ. ತಮ್ಮದೇ ಸಂಸ್ಥೆಯ ಸಿಬ್ಬಂದಿಯೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ  ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಬೇರೆ  ಸಮುದಾಯದ ಯುವಕರು, ಯುವತಿ ಅಲ್ಲದೆ ಹಲವು ಸಹೋದ್ಯೋಗಿಗಳು ಆ ಬಸ್ಸಿನಲ್ಲಿದ್ದರು ಎಂದು ತಿಳಿದು ಬಂದಿದೆ.ಈ ತಂಡದಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಬೇರೆ ಬೇರೆ ವಿಭಾಗದ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.


ನಿಖರ ಮಾಹಿತಿ ಮೇರೆಗೆ ಬಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ ಎಂಬ ಒಕ್ಕಣೆಯೊಂದಿಗೆ  ಸಾಮಾಜಿಕ ಜಾಲತಾಣದಲ್ಲಿ ಪೋಟೊ ಸಹಿತ ವೈರಲ್ ಆಗಿದೆ. ಜೊತೆಗೆ ಕೋಮು ಸೌಹಾರ್ದತೆ ಕೆಡಿಸಲು ,ಸಾಮಾಜದಲ್ಲಿ  ಅಶಾಂತಿಯ ವಾತಾವರಣ ಸೃಷ್ಟಿಸಿದವರ ವಿರುದ್ದ ದ.ಕ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾಮಾಜಿಕ ಮಾದ್ಯಮಗಳಲ್ಲಿ ವ್ಯಕ್ತವಾಗಿದೆ. ಕಡಬ ಪೊಲೀಸರ ಸಕಾಲಿಕ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top