




ಕಡಬ ಟೈಮ್ಸ್, ಆಲಂಕಾರು :ಕಾಡು ಪ್ರಾಣಿಗಳು ಇತ್ತೀಚೆಗೆ ಜನವಸತಿ ಪ್ರದೇಶದತ್ತ ಬರುತ್ತಿರುವುದು ಸುದ್ದಿಯಾಗುತ್ತಿದೆ.ಇದೀಗ ಕುಂತೂರು ಪದವು ಮೀಸಲು ಅರಣ್ಯ ಪ್ರದೇಶದಿಂದ ಕಾಡುಕೋಣಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಪೆರಾಬೆ ಗ್ರಾಮದ
ಇಡಾಳ, ಬೀರಂತಡ್ಕ,ಗುತ್ತಿಪಾಲು ಮತ್ತು ಕೇವಳ ಪರಿಸರದಲ್ಲಿ ಮೇ 14 ರ ಮುಂಜಾನೆ
ಕಾಡುಕೋಣಗಳು ಪ್ರತ್ಯಕ್ಷಗೊಂಡಿದೆ. ಅಲ್ಲದೆ ವಿದ್ಯುತ್ ಲೈನ್ ದುರಸ್ತಿ
ಕಾರ್ಯದ ನಿಮಿತ್ತ ತೆರಳುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳಿಗೆ
ಬೇರೆ ಬೇರೆ ಕಡೆಗಳಲ್ಲಿ ಕಾಡು ಕೋಣಗಳು ಎದುರುಗೊಂಡಿದ್ದು ಕಾಡುಕೋಣದ ಫೋಟೋ ಮೊಬೈಲ್ ನಲ್ಲಿ ಸೆರೆಯಾಗಿದೆ.
![]() |
ಕಾಡು ಕೋಣಗಳು ಪ್ರತ್ಯಕ್ಷವಾಗಿರುವುದು(KADABA TIMES) |
ಪೆರಾಬೆ
ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಕಾಡುಕೋಣಗಳು
ಕಾಣಸಿಕ್ಕಿದ್ದು ಕಾಡುದಾರಿಯಲ್ಲಿ
ನಡೆದುಕೊಂಡು ಹೋಗುವ ಜನರ ಮೇಲೆ ದಾಳಿ ಮಾಡಬಹುದೆಂದು ಸ್ಥಳೀಯರು ಆತಂಕವ್ಯಕ್ತಪಡಿಸಿದ್ದಾರೆ. ಮೇ15 ರಂದು ಕೂಡ
ಕೆಲವರಿಗೆ ಕಾಡುಕೋಣ
ಕಾಣಿಸಿಕೊಂಡಿರುವುದಾಗಿ ಸ್ಥಳೀಯರು
ಮಾಹಿತಿ ನೀಡಿದ್ದಾರೆ.
ಈ
ಹಿಂದೆ ಕಾಡುಕೋಣಗಳ ಹಿಂಡು ಪದವು ಸಮೀಪ ಜನರಿಗೆ ಕಾಣಸಿಕ್ಕಿತ್ತು. ಇದೀಗ ಪ್ರತ್ಯೇಕಗೊಂಡು ಬೇರೆ ಬೇರೆ
ಸ್ಥಳದಲ್ಲಿ ಕಾಣಸಿಕ್ಕಿದೆ. ಮಳೆಗಾಲದ ಸಿದ್ದತೆಗಾಗಿ ಜನರು ಕಾಡಿನಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದು
ಮರ ತುಂಡರಿಸುವ ಮೆಷಿನ್ ಶಬ್ದಕ್ಕೆ ತತ್ತರಗೊಂಡು ಪ್ರತ್ಯೇಕಿಸಲ್ಪಟ್ಟಿರಬಹುದು, ಅಥವಾ ಕಾಡಂಚಿನಲ್ಲಿ
ಜನರ ಚಟುವಟಿಕೆ ಇರುವುದೇ ಕಾಡು ಕೋಣಗಳು ರಸ್ತೆಗಳತ್ತ ಬರಲು ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.
ಸುಮಾರು
6 ತಿಂಗಳ ಹಿಂದೆ ಪದವು
- ಕೆದ್ದೋಟೆ- ಇಡಾಳ ಸಂಪರ್ಕ ರಸ್ತೆಯ ಮಧ್ಯೆ ಒಂದು ಕಾಡುಕೋಣ ಸ್ಥಳೀಯರಿಗೆ ಕಾಣ ಸಿಕ್ಕಿತ್ತು. ಕಾಡು ಕೋಣಗಳ ಓಡಾಟದ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಸಂಗ್ರಹಿಸಿದೆ ಎಂದು
ತಿಳಿದು ಬಂದಿದೆ.